ಉತ್ತರ ಸಿರಿಯದಿಂದ ಅಮೆರಿಕದ 1,000 ಸೈನಿಕರ ವಾಪಸಾತಿ: ಪೆಂಟಗನ್ ಘೋಷಣೆ

Update: 2019-10-14 17:51 GMT

ವಾಶಿಂಗ್ಟನ್, ಅ. 14: ಉತ್ತರ ಸಿರಿಯದಲ್ಲಿ ಕುರ್ದ್ ಬಂಡುಕೋರರ ನೆಲೆಗಳ ಮೇಲೆ ಟರ್ಕಿ ಪಡೆಗಳು ಸೇನಾ ಕಾರ್ಯಾಚರಣೆ ನಡೆಸುತ್ತಿರುವಂತೆಯೇ, ಅಲ್ಲಿಂದ ಸುಮಾರು 1,000 ಅಮೆರಿಕ ಸೈನಿಕರನ್ನು ವಾಪಸ್ ಪಡೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ರವಿವಾರ ಹೇಳಿದೆ.

ಇಷ್ಟು ಸಂಖ್ಯೆಯ ಸೈನಿಕರು ವಾಪಸಾದರೆ, ಸಿರಿಯದಲ್ಲಿರುವ ಬಹುತೇಕ ಎಲ್ಲ ಭೂಸೇನಾ ಪಡೆಗಳು ವಾಪಸಾದಂತಾಗುತ್ತದೆ.

ಈ ವಿಷಯವನ್ನು ರವಿವಾರ ಘೋಷಿಸಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಟರ್ಕಿ ಪಡೆಗಳು ಸಿರಿಯದಲ್ಲಿ ಮೊದಲು ಊಹಿಸಿರುವುದಕ್ಕಿಂತಲೂ ಹೆಚ್ಚು ಒಳಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

‘‘ಮುಂದುವರಿಯುತ್ತಿರುವ ಎರಡು ವಿರೋಧಿ ಸೇನೆಗಳ ನಡುವೆ ಅಮೆರಿಕ ಸೈನಿಕರು ಸಿಕ್ಕಿ ಹಾಕಿಕೊಂಡಿದ್ದಾರೆ. ಇಂಥ ಪರಿಸ್ಥಿತಿಯನ್ನು ಎದುರಿಸಲು ನಮಗೆ ಸಾಧ್ಯವಿಲ್ಲ’’ ಎಂದು ಎಸ್ಪರ್ ಸಿಬಿಎಸ್‌ನ ‘ಫೇಸ್ ದ ನೇಶನ್’ ಕಾರ್ಯಕ್ರಮದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News