ಕವಿ ಸಮ್ಮೇಳನಕ್ಕೆ ಕವನ ಆಹ್ವಾನ

Update: 2019-10-15 12:42 GMT

ಉಡುಪಿ, ಅ.15: ಮಂಡ್ಯದ ಕನ್ನಂಬಾಡಿ ದಿನಪತ್ರಿಕೆಯ ರಾಜ್ಯ ಕವಿಮಿತ್ರ ಕೂಟದ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆಯ ‘ಕನ್ನಡಹಬ್ಬ’ದ ಅಂಗವಾಗಿ ರಾಜ್ಯ ಮಟ್ಟದ ಕವಿ ಸಮ್ಮೇಳನವನ್ನು ಮಂಡ್ಯ ನಗರದಲ್ಲಿ ಆಯೋಜಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಆಸಕ್ತರಿಂದ ಎರಡು ಕವನಗಳು ಮ ತ್ತು ಮಾಹಿತಿಯನ್ನು ಆಹ್ವಾನಿಸಲಾಗಿದೆ.

ಈ ಸಂದರ್ಭದಲ್ಲಿ ನೂರು ಕವಿಗಳನ್ನು ಆಯ್ಕೆಮಾಡಿ ಕವಿಗೋಷ್ಠಿಗೆ ಅವಕಾಶ ನೀಡಲಾಗುವುದು. ಅತ್ಯುತ್ತಮ ಇಪ್ಪತ್ತು ಕವಿಗಳಿಗೆ ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನೂರು ಕವಿತೆಯಲ್ಲಿ ಅತ್ಯುತ್ತಮ ಕವಿತೆಯ ಕವಿಯನ್ನು ಕವಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಗುವುದು. ಅಲ್ಲದೇ ಹತ್ತು ಮಂದಿಗೆ ‘ಕನ್ನಡರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಆಸಕ್ತರು 25 ಸಾಲಿನ ಎರಡು ಕವನಗಳನ್ನು ಅ.25ರೊಳಗೆ ಎರಡು ಪೋಟೋ, ಕಿರುಪರಿಚಯ ಹಾಗೂ ಮಾದರಿ ಸಹಿಯೊಂದಿಗೆ ಎಸ್. ಕೃಷ್ಣ ಸ್ವರ್ಣಸಂದ್ರ ಅಧ್ಯಕ್ಷರು, ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ಕವಿಮಿತ್ರ, ನಂ-767, ಸ್ವರ್ಣಸಂದ್ರ, ಮಂಡ್ಯ-2. ಇಲ್ಲಿಗೆ ಕಳುಹಿಸುವಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News