ಕಾರಂತ ಥೀಮ್‌ಪಾರ್ಕ್‌ನಲ್ಲಿ ಯುದ್ಧ ವಿಮಾನದ ಪ್ರದರ್ಶನಕ್ಕೆ ಮನವಿ
Update: 2019-10-15 20:50 IST
ಉಡುಪಿ, ಅ.15: ರಾಜ್ಯ ಮುಜರಾಯಿ, ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಹೊಸದಲ್ಲಿಯಲ್ಲಿ ಭೇಟಿ ಮಾಡಿ ಕೋಟದಲ್ಲಿರುವ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಯುದ್ಧ ವಿಮಾನದ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಅರಿವನ್ನು ಮೂಡಿಸಲು ಯುದ್ಧ ವಿಮಾನ ವನ್ನು ಡಾ.ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಪ್ರದರ್ಶನ ಮಾಡುವ ಬಗ್ಗೆ ಮನವಿ ಮಾಡಿ ಚರ್ಚಿಸಿದರು. ಇದರ ಜೊತೆಗೆ ರಾಜ್ಯದ ಎ ದರ್ಜೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಾವಿರ ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಅನುಷಾ್ಠನಿಸಲು ಸಹ ಚರ್ಚೆ ಮಾಡಲಾಯಿತು.
ಸಚಿವ ಕೋಟ ಮುಂದಿಟ್ಟ ಪ್ರಸ್ತಾವನೆಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ ವ್ಯಕ್ತಪಡಿಸಿದರು ಎಂದು ಸಚಿವ ಕಚೇರಿ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.