ಬಂಟ್ವಾಳ: ಕೆಲಸಕ್ಕೆ ತೆರಳಿದ ಯುವತಿ ನಾಪತ್ತೆ

Update: 2019-10-15 15:22 GMT

ಬಂಟ್ವಾಳ, ಅ. 15: ಕಂಪೆನಿಯೊಂದಕ್ಕೆ ಕೆಲಸಕ್ಕೆ ತೆರಳಿದ ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ಕಾಂಜೀರ್ ಕೋಡಿ ನಿವಾಸಿ ಪ್ರಕಾಶ್ ದೇವಾಡಿಗ ಎಂಬವರ ಪುತ್ರಿ ಚೈತ್ರಾ (19) ನಾಪತ್ತೆಯಾದ ಯುವತಿ.

ಆ. 14ರಂದು ಚೈತ್ರಾ ಬಿ.ಸಿ.ರೋಡಿನ ಬ್ಯಾಗ್ ಕಂಪೆನಿಗೆ ಕೆಲಸಕ್ಕೆ ಹೋಗುತ್ತೇನೆಂದು ಮನೆಮಂದಿಗೆ ತಿಳಿಸಿದ್ದು, ಬಳಿಕ ಸಂಜೆ 6ಗಂಟೆಗೆ ಫೋನ್ ಮಾಡಿದ್ದಾರೆ. ಆದರೆ, ರಾತ್ರಿ 8 ಗಂಟೆಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಚೈತ್ರಾ ಅವರ ತಾಯಿ ಪದ್ಮಾವತಿ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈಕೆಯ ಬಗ್ಗೆ ಸುಳಿವು ಸಿಕ್ಕರೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಿಳಿಸುವಂತೆ ಎಸ್ಸೈ ಚಂದ್ರಶೇಖರ್ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News