'ಬುಲ್‌ಟ್ರಾಲ್-ಲೈಟ್ ಫಿಶಿಂಗ್ ಮೀನುಗಾರಿಕೆಗೆ ಅವಕಾಶ ಬೇಡ'

Update: 2019-10-15 15:44 GMT

ಮಂಗಳೂರು, ಅ.15:ನಿಯಮ ಉಲ್ಲಂಘಿಸಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಹೊರತಾಗಿಯೂ ಕೆಲವರು ಬುಲ್‌ಟ್ರಾಲ್-ಲೈಟ್ ಫಿಶಿಂಗ್ ಮೀನುಗಾರಿಕೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಹಾಗಾಗಿ ಯಾವ ಕಾರಣಕ್ಕೂ ಇದಕ್ಕೆ ಅವಕಾಶ ಕಲ್ಪಿಸುವುದು ಬೇಡ ಎಂದು ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.

 ಕಾನೂನು ಪ್ರಕಾರ ಬುಲ್‌ಟ್ರಾಲ್-ಲೈಟ್ ಪಿಶಿಂಗ್ ಮಾಡುವಂತಿಲ್ಲ. ನಿಯಮ ಮೀರಿ ಅದಕ್ಕೆ ಅನುಮತಿ ಕೊಡಲು ಮೀನುಗಾರಿಕೆ ಇಲಾಖೆಗೂ ಸಾಧ್ಯವಿಲ್ಲ. ಈ ಮಧ್ಯೆ ಬುಲ್‌ಟ್ರಾಲ್ ಮೀನುಗಾರಿಕೆಗೆ ಪ್ರಯತ್ನ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸಿ ಮೀನುಗಾರಿಕೆ ಮಾಡಿದರೆ ಮೀನುಗಳ ಸಂತತಿ ನಾಶವಾಗಲಿದೆ. ಇದನ್ನು ಮೀನು ಉದ್ಯಮಿಗಳು ಅರ್ಥ ಮಾಡಿಕೊಳ್ಳಬೇಕು. ಈಗಾಗಲೆ ಉಡುಪಿಯಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಆದಾಗ್ಯೂ ಮಂಗಳೂರಿನಲ್ಲಿ ಪ್ರಯತ್ನ ಮಾಡಲಾತ್ತಿದೆ. ಇದು ಸರಿಯಲ್ಲ. ಮೀನುಗಾರರೆಲ್ಲರೂ ಸೌಹಾರ್ದಯುತವಾಗಿ ಮೀನುಗಾರಿಕೆ ನಡೆಸುವ ಸಲುವಾಗಿ ಕಾನೂನು ಪಾಲಿಸುವ ಅಗತ್ಯವಿದೆ ಎಂದು ಅಲಿ ಹಸನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News