ಮತದಾರರ ಪಟ್ಟಿ ಪರಿಷ್ಕರಣೆ: ಗೊಂದಲ ನಿವಾರಿಸಲು ಎಸ್‌ಡಿಪಿಐ ಮನವಿ

Update: 2019-10-15 15:50 GMT

 ಮಂಗಳೂರು, ಅ.15: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರು ಪರಿಶೀಲನೆ ನಡೆಯುತ್ತಿದೆ. ಅದರಂತೆ ಮತದಾರರು ಗುರುತಿನ ಚೀಟಿಯೊಂದಿಗೆ ಪಡಿತರ ಚೀಟಿಯನ್ನು ಬಿಎಲ್ಒಗಳು ಮನೆ ಮನೆಗೆ ತೆರಳಿ ಕೇಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಮತ್ತು ಮತದಾರರಿಗೆ ಗೊಂದಲ, ಭಯವಿದೆ. ಅಲ್ಲದೆ ಜಾಗೃತಿಯೂ ಇಲ್ಲ. ಹಾಗಾಗಿ ಜಿಲ್ಲಾಡಳಿತವು ಗೊಂದಲ ನಿವಾರಿಸಬೇಕು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಜಿಲ್ಲಾಡಳಿತವು ಈ ಬಗ್ಗೆ ಮೊದಲೇ ಮಾಹಿತಿ ಕೊಟ್ಟು ಜಾಗೃತಿ ಮೂಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಆದ್ದರಿಂದ ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡುವ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಜಿಲ್ಲಾಡಳಿತ ನೀಡಬೇಕು. ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸುವ ಕೆಲಸವೂ ಮಾಡಬೇಕು. ಬಳಿಕ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಕೆಲಸ ಮಾಡಬೇಕು. ಅದು ಬಿಟ್ಟು ದಿಢೀರನೆ ಮನೆ ಮನೆಗೆ ತೆರಳಿ ದಾಖಲೆಗಳನ್ನು ಕೇಳುವಾಗ ಮತದಾರರು ಸಮಸ್ಯೆಗೆ ಮತ್ತು ಗೊಂದಲಕ್ಕೆ ಸಿಲುಕುತ್ತಿದ್ದಾರೆ. ಇದರ ಬಗ್ಗೆ ಕೆಲವು ಬಿಎಲ್‌ಒಗಳಿಗೆ ಕೂಡ ಮಾಹಿತಿ ಇಲ್ಲ. ಕೆಲವೊಂದು ಬಿಎಲ್‌ಒಗಳನ್ನು ಸಂಪರ್ಕಿಸಿದಾಗ ಹೆಚ್ಚಿನ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಹಾಗಾಗಿ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News