ಮಲ್ಪೆ: ನದಿಗೆ ಬಿದ್ದು ಛತ್ತಿಸಗಡದ ವ್ಯಕ್ತಿ ಮೃತ್ಯು
Update: 2019-10-15 22:14 IST
ಮಲ್ಪೆ, 15: ಮಲ್ಪೆಯಲ್ಲಿ ಬೋಟಿನ ಕಲಾಸಿ ಕೆಲಸಕ್ಕೆ ಬಂದಿದ್ದ ಛತ್ತಿಸಗಡ ರಾಜ್ಯದ ವ್ಯಕ್ತಿಯೊಬ್ಬರ ಮೃತದೇಹ ಪಡುತೋನ್ಸೆ ಗ್ರಾಮದ ಪಡುಕುದ್ರು ಗಜಾನೆ ಎಂಬಲ್ಲಿ ಸುವರ್ಣ ನದಿಯಲ್ಲಿ ಅ.14ರಂದು ಸಂಜೆ ವೇಳೆ ಪತ್ತೆಯಾಗಿದೆ.
ಮೃತರನ್ನು ಛತ್ತಿಸಗಡ ರಾಜ್ಯದ ಕರ್ನೋ ಮಾಂಜಿ (42) ಎಂದು ಗುರುತಿಸ ಲಾಗಿದೆ. ಅ.13ರಂದು ರಾತ್ರಿ ರೂಮಿನಿಂದ ನಾಪತ್ತೆಯಾಗಿದ್ದ ಕರ್ನೋ ಮಾಂಜಿ ಯಾವುದೋ ಕಾರಣದಿಂದ ಕೆಮ್ಮಣ್ಣು ಪಡುಕುದ್ರುವಿಗೆ ಹೋಗಿದ್ದು, ಅಲ್ಲಿ ಆಕಸ್ಮಿಕವಾಗಿ ಅಥವಾ ಯಾವುದೋ ಕಾರಣದಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.