ಮಹಿಳೆಯನ್ನು ನಂಬಿಸಿ ಚಿನ್ನಾಭರಣ ಕಳವು
Update: 2019-10-15 22:14 IST
ಉಡುಪಿ, ಅ.15: ಅಯುಷ್ಮಾನ್ ಯೋಜನೆಯಡಿ ಹಣ ಕೊಡಿಸುವುದಾಗಿ ನಂಬಿಸಿ ಮಹಿಳೆಯ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಅ.14 ರಂದು ಮಧ್ಯಾಹ್ನ ಉಡುಪಿಯಲ್ಲಿ ನಡೆದಿದೆ.
ರಾಜೇಶ್ ಎಂಬ ವ್ಯಕ್ತಿ ಅಯುಷ್ಮಾನ್ ಯೋಜನೆಯಡಿ 3,00,000 ರೂ. ಕೊಡಿಸುವುದಾಗಿ ಉಡುಪಿಯ ಲೀಲಾ ಬಾಯಿ(70) ಎಂಬವರನ್ನು ನಂಬಿಸಿ ಉಡುಪಿಯ ಟಿ.ಎಂ.ಎ.ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಅಲ್ಲಿ ಲೀಲಾ ಬಾಯಿ ಅವರಿಂದ 24,000ರೂ. ಮೌಲ್ಯದ ಎರಡು ಚಿನ್ನದ ಬಳೆ ಮತ್ತು ಒಂದು ಉಂಗುರವನ್ನು ಪಡೆದ ಆತ, ಸ್ವಲ್ಪಸಮಯದ ನಂತರ ನಕಲಿ ಬಳೆಯನ್ನು ನೀಡಿ ವಂಚಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.