×
Ad

ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2019-10-15 22:16 IST

ಮಣಿಪಾಲ, ಅ.15: ಮಣಿಪಾಲದ ಮಾಹೆ ಸಿ-ಟೈಪ್ ಕ್ವಾಟ್ರಾಸ್ ನಿವಾಸಿ ಅರವಿಂದ ರಾವ್(39) ಎಂಬವರು ಅ.14ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಅಲೆವೂರು ಗುಡ್ಡೆಯಂಗಡಿಯ ನಿತೇಶ್(19) ಎಂಬವರು ಅ.11ರಂದು ಬೆಳಗ್ಗೆ ಔಷಧಿ ತರಲು ಕುಕ್ಕಿಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News