ತಳ ಮಟ್ಟದಲ್ಲಿ ಕಲೆ, ಸಾಹಿತ್ಯದಲ್ಲಿ ತೊಡಗಿಕೊಂಡಿರುವವರಿಗೆ ಅಕಾಡೆಮಿಯಿಂದ ಪ್ರೋತ್ಸಾಹ ನೀಡುವ ಗುರಿ: ರಹೀಂ ಉಚ್ಚಿಲ್‌

Update: 2019-10-15 16:56 GMT

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಎರಡನೆ ಬಾರಿಗೆ ಆಯ್ಕೆಗೊಂಡ ರಹೀಂ ಉಚ್ಚಿಲ್ ಮಾತನಾಡಿ ‘‘ನಾನು ಎರಡನೆ ಬಾರಿಗೆ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಆಯ್ಕೆಗೊಂಡಿದ್ದೇನೆ. ಮೊದಲ ಬಾರಿಗೆ ಆಯ್ಕೆಗೊಂಡ ಸಂದರ್ಭದಲ್ಲಿ ಒಂದು ವರ್ಷ ನನ್ನ ಅವಧಿ ಪೂರೈಸಿದ್ದೇನೆ. ಬಳಿಕ ಸರಕಾರ ಬದಲಾವಣೆಯಾದಾಗ ನಮ್ಮ ನೇಮಕಾತಿಯನ್ನು ರದ್ದುಗೊಳಿಸಲಾಯಿತು. ಅದರ ವಿರುದ್ಧ ನಾನು ನ್ಯಾಯಾಲಯದಲ್ಲಿಯೂ ಹೋರಾಟ ಮಾಡಿದ್ದೇನೆ. ಇದೀಗ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಾಗ ನನಗೆ ಅವಕಾಶ ದೊರೆತಿದೆ. ಆದರೆ ನಾನು ಈ ಬಾರಿ ನಿರೀಕ್ಷಿಸಿರಲಿಲ್ಲ. ನಾನು ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚದ ಉಪಾಧ್ಯಕ್ಷನಾಗಿಯೂ ಎರಡನೆ ಬಾರಿ ಆಯ್ಕೆಗೊಂಡವನು ಎಂದರು.

ನಮ್ಮ ಮುಖಂಡರ ತೀರ್ಮಾನದಂತೆ ಆಯ್ಕೆ ನಡೆದಿದೆ. ಈ ಬಾರಿಯೂ ನನ್ನ ಅಧಿಕಾರವಧಿಯಲ್ಲಿ ವಿಶೇಷ ಯೋಜನೆಗಳನ್ನು ಹಮ್ಮಿ ಕೊಳ್ಳುವ ಉದ್ದೇಶವಿದೆ. ಎಲ್ಲರ ಸಲಹೆ ಸೂಚನೆ ತೆಗೆದುಕೊಂಡು ಮೂರು ವರ್ಷದಲ್ಲಿ ತಳ ಮಟ್ಟದಲ್ಲಿ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವವರನ್ನು ಗುರಿತಿಸಿ ಅವರಿಗೆ ಯಾರ ಶಿಫಾರಸು ಇಲ್ಲದೆ ಅವಕಾಶ ನೀಡಬೇಕು, ಅವರನ್ನು ಪೋತ್ಸಾಹಿಸುವ ಕೆಲಸ ಮಾಡಬೇಕು ಎನ್ನುವ ಚಿಂತನೆ ಇದೆ. ಸರಕಾರದ ಬೆಂಬಲ ಮತ್ತು ನಮ್ಮ ಮುಖಂಡರ ಬೆಂಬಲ ದೊರೆಯುತ್ತದೆ ಎನ್ನುವ ವಿಶ್ವಾಸ ಇದೆ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಹೀಮ್ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News