×
Ad

ಜೆ.ಎನ್.ಯು. ವಿದ್ಯಾರ್ಥಿ ನಜೀಬ್ ನನ್ನು ಹುಡುಕಿಕೊಡುವಂತೆ ವಿದ್ಯಾರ್ಥಿಗಳ ಆಗ್ರಹ

Update: 2019-10-15 22:39 IST

ಭಟ್ಕಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಭಟ್ಕಳ ಶಾಖೆಯ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಇಲ್ಲಿನ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳ ಹಿಂದೆ ಜೆ.ಎನ್.ಯು ವಿಶ್ವವಿದ್ಯಾಲಯದಿಂದ ಕಣ್ಮರೆಯಾಗಿರುವ ನಜೀಬ್ ನನ್ನು ಹುಡುಕಿಕೊಡುವಂತೆ ಆಗ್ರಹಿಸಿದರು.

ಇಲ್ಲಿನ ಸಹಾಯಕ ಆಯುಕ್ತರ ಕಚೇರಿ ಮುಂದೆ ಸೇರಿದ ವಿದ್ಯಾರ್ಥಿಗಳ ನಜೀಬ್ ಎಲ್ಲಿ ? ಆತನನ್ನು ಹುಡುಕಿಕೊಡಿ ಎಂಬ ಘೋಷಣೆಗಳನ್ನು ಮೊಳಗಿಸುವುದರ ಮೂಲಕ ಪೊಲೀಸ್ ವೈಫಲ್ಯವನ್ನು ಖಂಡಿಸಿದ್ದು ಪ್ರಧಾನಿಯ ಸಂಬಂಧಿಯ ಪರ್ಸ್‍ನ್ನು ಹುಡುಕಿಕೊಟ್ಟಿರುವ ಪೊಲೀಸರು ನಜೀಬ್ ನನ್ನೇಕೆ ಹುಡುಕುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಸಂದರ್ಭ ಮಾತನಾಡಿದ ಪತ್ರಕರ್ತ ಝೌರೇಝ್ ಮಷಾಯಿಖ್, ಪ್ರತಿವರ್ಷ ತನ್ನ ಜನ್ಮದಿನದಂದು ತಾಯಿಯನ್ನು ಭೇಟಿ ಮಾಡುವ ಪ್ರಧಾನಿಗಳಿಗೆ ನಾವು ನೆನಪಿಸುವುದೇನಂದರೆ ಪ್ರತಿವರ್ಷ ನಜೀಬ್ ನ ಜನ್ಮದಿನಾಚರಣೆಯಾಗುತ್ತೇ ಆತನ ತನ್ನ ಮಗನ ಬರುವಿಕೆಗಾಗಿ ಕಾಯುತ್ತಿದ್ಧಾಳೆ ನಿಮಗೆ ನಿಮ್ಮ ತಾಯಿಯನ್ನು ಕಾಣುವ ಆತುರ ಹೇಗೂ ಹಾಗೆಯೇ ನಜೀಬ್ ತಾಯಿಗೆ ತನ್ನ ಮಗನನ್ನು ಕಾಣುವ ಆತುರವಿದೆ ಪ್ರಧಾನಿಗಳೇ ನಜೀಬ್ ನನ್ನು ಹುಡುಕಿಕೊಡಿ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News