ಪಾಪ್ಯುಲರ್ ಫ್ರಂಟ್ ಕಲ್ಲಡ್ಕ ವತಿಯಿಂದ 'ಜನಾರೋಗ್ಯವೇ ರಾಷ್ಟ್ರಶಕ್ತಿ' ಕಾರ್ಯಕ್ರಮ

Update: 2019-10-15 17:27 GMT

ಬಂಟ್ವಾಳ: ದೇಶದ ಜನರಲ್ಲಿ ಆರೋಗ್ಯ ಮತ್ತು ಸ್ವರಕ್ಷಣೆಯ ಕುರಿತಾದಂತೆ ಜಾಗೃತಿ ಮೂಡಿಸುವ ಸಲುವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ 'ಜನಾರೋಗ್ಯವೇ ರಾಷ್ಟ್ರಶಕ್ತಿ ಎಂಬ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿದೆ.

ಇದರ ಅಂಗವಾಗಿ  ಮಂಗಳವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಲ್ಲಡ್ಕ ವಲಯದ ವತಿಯಿಂದ ಮ್ಯಾರಥಾನ್, ಯೋಗ ಹಾಗೂ ಆತ್ಮರಕ್ಷಣಾ ಕಲೆಯನ್ನು ಹಮ್ಮಿಕೊಳ್ಳಲಾಯಿತು.

ಕಲ್ಲಡ್ಕ ಟಿಕ್ಕಾ ಪಾಯಿಂಟ್ ಮುಂಭಾಗದಿಂದ ಕಾರ್ಯಕ್ರಮ ಪ್ರಾರಂಭವಾಗಿದ್ದು, ಇಲ್ಯಾಸ್ ಬಲ್ಲೆಕೋಡಿರವರಿಗೆ ಪಾಪ್ಯುಲರ್ ಫ್ರಂಟ್ ಕಲ್ಲಡ್ಕ ಡಿವಿಶನ್ ಅಧ್ಯಕ್ಷ ಝಕರಿಯಾ ಗೋಳ್ತಮಜಲು ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಮ್ಯಾರಥಾನ್ ಓಟವು ಕಲ್ಲಡ್ಕದಿಂದ ಪ್ರಾರಂಭಗೊಂಡು ಹೆದ್ದಾರಿ ಮೂಲಕ ಕೆ.ಸಿರೋಡ್ ಮುಖಾಂತರ ಮುರಬೈಲ್ ನಲ್ಲಿ ಅಂತ್ಯಗೊಂಡಿತು. ಬಳಿಕ ಪಾಪ್ಯುಲರ್ ಫ್ರಂಟ್ ಸದಸ್ಯರಿಂದ ಕವಾಯತು ಹಾಗೂ ಯೋಗ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಬಂಟ್ವಾಳ ಜಿಲ್ಲಾಧ್ಯಕ್ಷ ಇಜಾಝ್,  ಎಸ್ಡಿಪಿಐ ಗೋಳ್ತಮಜಲು ಗ್ರಾಮ ಸಮಿತಿ ಅಧ್ಯಕ್ಷ ಜವಾಝ್ ಕಲ್ಲಡ್ಕ, ಪಾಪ್ಯುಲರ್ ಫ್ರಂಟ್ ಗೋಳ್ತಮಜಲು ಏರಿಯಾ ಅಧ್ಯಕ್ಷ ಇಸಾಕ್, ಪಾಪ್ಯುಲರ್ ಫ್ರಂಟ್ ಮುಖಂಡ ಸತ್ತಾರ್ ಕಲ್ಲಡ್ಕ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಮನ್ಸೂರ್ ಸ್ವಾಗತಿಸಿ, ಸತ್ತಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News