ಅ.19ಕ್ಕೆ ಕಾರ್ಕಳದಲ್ಲಿ ಕಲಾಶ್ರೀ ಶಿಬಿರ

Update: 2019-10-16 14:26 GMT

ಕಾರ್ಕಳ, ಅ.16: ಕಾರ್ಕಳ ತಾಲೂಕು ಶಿಶು ಅಭಿವೃಧ್ಧಿ ಯೋಜನೆ, ಸೌಹಾರ್ದ ಸ್ತ್ರೀಶಕ್ತಿ ಭವನದಲ್ಲಿ ಅ.19ರಂದು ಬೆಳಗ್ಗೆ 9 ಗಂಟೆಗೆ ಕಲಾಶ್ರೀ ಶಿಬಿರವನ್ನು ಆಯೋಜಿಸಲಾಗಿದೆ.

ಕಲಾಶ್ರೀ ಪ್ರಶಸ್ತಿಗೆ 9ರಿಂದ 16 ವರ್ಷದೊಳಗಿನ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸೃಜನಾತ್ಮಕ ಕಲೆ: ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಸೃಜನಾತ್ಮಕ ಬರವಣಿಗೆ: ಕಥೆ, ಕವನ, ಪ್ರಬಂಧ ಬರೆಯುವುದು (ಮೂರಲ್ಲೂ ಭಾಗವಹಿಸುವಿಕೆ ಕಡ್ಡಾಯ).

ಸೃಜನಾತ್ಮಕ ಪ್ರದರ್ಶನ ಕಲೆ: ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ ನೃತ್ಯ, ಮ್ಯಾಜಿಕ್ ಇತ್ಯಾದಿ ಯಾವುದಾದರೊಂದು ಕಲೆಯ ಪ್ರದರ್ಶನಕ್ಕೆ ಅವಕಾಶ ವಿದೆ. ವಿಜ್ಞಾನದಲ್ಲಿ ನೂತನ ಅವಿಷ್ಕಾರ: ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

ಗಾಂಧಿ ಜಯಂತಿ ಆಚರಣೆ: 5ರಿಂದ 16ವರ್ಷದೊಳಗಿನ ಮಕ್ಕಳು ಚಿತ್ರಕಲೆಯಲ್ಲಿ 3 ಗುಂಪಿನಂತೆ ಒಟ್ಟು 9 ಮಕ್ಕಳು (5ರಿಂದ 8, 9 ರಿಂದ 12, 13ರಿಂದ 16) ಭಾಗವಹಿಸಬಹುದು. ಸ್ವಾತಂತ್ರ ದಿನಾಚರಣೆ: 5ರಿಂದ 16 ವರ್ಷದೊಳಗಿನ ಮಕ್ಕಳು ದೇಶಭಕ್ತಿಗೀತೆಯಲ್ಲಿ 3 ಗುಂಪಿನಂತೆ ಒಟ್ಟು 9 ಮಕ್ಕಳು (5ರಿಂದ 8, 9ರಿಂದ 12, 13ರಿಂದ 16) ಭಾಗವಹಿಸಬಹುದು.

ಹೆಚ್ಚಿನ ವಿವರಗಳಿಗೆ ಕಾರ್ಕಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News