ಯೆಯ್ಯಡಿ : 5.65 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

Update: 2019-10-16 14:57 GMT

ಮಂಗಳೂರು, ಅ.16:ಯೆಯ್ಯಡಿ ಕೈಗಾರಿಕಾ ವಲಯದಲ್ಲಿ 5.65 ಕೋ.ರೂ. ವೆಚ್ಚದಲ್ಲಿ ನಡೆಸಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ನಗರದಲ್ಲಿ ಕೈಗಾರಿಕಾ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಯೆಯ್ಯಿಡಿ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 5.65 ಕೋ.ರೂ. ಅನುದಾನ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಯೆಯ್ಯಿಡಿ ವಸಾಹತು ನೆಲೆಯಲ್ಲಿ ಒಳ ಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ಆರ್‌ಸಿಸಿ, ಚರಂಡಿ ನೀರು ಸಂಗ್ರಹಾಗಾರ, ಬೀದಿ ದೀಪಗಳ ಅಳವಡಿಕೆ ಸಹಿತ ವಿವಿಧ ಕಾಮಗಾರಿಗಳಿಗೆ ಈ ಮೊತ್ತ ವ್ಯಯಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ರೂಪಾ ಡಿ. ಬಂಗೇರ, ಸಂಜಯ ಪ್ರಭು, ಶ್ರೀನಿವಾಸ್ ಶೇಟ್, ವಸಂತ ಜೆ. ಪೂಜಾರಿ, ಸೂರಜ್ ಕಾಮತ್, ಪ್ರವೀಣ್ ಗುಂಡಳಿಕೆ, ಚರಣ್ ಗುಂಡಳಿಕೆ, ದಿನೇಶ್ ಬಂಗೇರ, ಗುತ್ತಿಗೆದಾರ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅದ್ಯಕ್ಷ ವಿಶಾಲ್ ಸಾಲ್ಯಾನ್, ಮಾಜಿ ಅಧ್ಯಕ್ಷರುಗಳಾದ ಅಣ್ಣಪ್ಪಪೈ, ಜಯರಾಜ್ ಪೈ, ಸುಮಿತ್ ರಾವ್, ಗೋಪಿನಾಥ್ ಮಲ್ಯ, ಸಂಘದ ಮುಖಂಡರಾದ ರಘುವೀರ್ ನಾಯಕ್, ಕೃಷ್ಣದಾಸ್ ಕಾಮತ್, ಕೆಎಸ್‌ಐಎ ಬೈಕಂಪಾಡಿ ಅಧ್ಯಕ್ಷ ಅಜಿತ್ ಕಾಮತ್, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಫೀಕ್ ಅಹ್ಮದ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News