ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

Update: 2019-10-16 16:37 GMT

ಮಲ್ಪೆ, ಅ.16: ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನು ಗಾರರೊಬ್ಬರು ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಅ.15ರಂದು ಮಧ್ಯಾಹ್ನ 3:30ರ ಸುಮಾರಿಗೆ ನಡೆದಿದೆ.

ಮೃತರನ್ನು ಕೊಡವೂರಿನ ಜಯ ಸಾಲ್ಯಾನ್(54) ಎಂದು ಗುರುತಿಸಲಾಗಿದೆ.

ಇವರು ಇತರ ಮೀನುಗಾರರೊಂದಿಗೆ ಶ್ರೀಗುರುಬ್ರಹ್ಮ ಪರ್ಸಿನ್ ಬೋಟಿನಲ್ಲಿ ಅ.15ರಂದು ಮಲ್ಪೆಬಂದರಿನಿಂದ ಮೀನುಗಾರಿಕೆಯ ಬಗ್ಗೆ ಸಮುದ್ರಕ್ಕೆ ತೆರಳಿದ್ದರು. ಸುಮಾರು 20 ಆಳ ಸಮುದ್ರದಲ್ಲಿ ಜಯ ಸಾಲ್ಯಾನ್ ಬಲೆ ಎಳೆಯುತ್ತಿರುವಾಗ ಬೋಟಿನಿಂದ ಆಯತಪ್ಪಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟರೆನ್ನಲಾಗಿದೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News