ಮಹಿಳೆಯ ಸಂಶಯಾಸ್ಪದ ಸಾವು: ದೂರು

Update: 2019-10-16 16:41 GMT

ಕಾರ್ಕಳ, ಅ.16: ಹೊನ್ನಾವರ ತಾಲೂಕಿನ ಮಾವಿನ ಕುರ್ವಾ ನಿವಾಸಿ ಅನ್ ಮಿನಿನ್ ಜಡ್ತ ಎಂಬವರ ಮಗಳು ಪಾವ್ಲಿನ್, ಸೂಡ ಗ್ರಾಮದಲ್ಲಿರುವ ಪತಿಯ ಮನೆಯಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾವ್ಲಿನ್ 2016ರ ಜ.6ರಂದು ಸೂಡ ಗ್ರಾಮದ ಲಾರೆನ್ಸ್ ಮೆಂಡೋನ್ಸ್ ಎಂಬವರ ಮಗ ರವಿ ಮೆಂಡೊನ್ಸ್ ಎಂಬವರನ್ನು ವಿವಾಹವಾಗಿದ್ದು, ಬಳಿಕ ಗಂಡ ಹೆಂಡತಿಯ ಮಧ್ಯೆ ಸಣ್ಣಪುಟ್ಟ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು. ಅ.14ರಂದು ರಾತ್ರಿ 9:30 ಗಂಟೆಗೆ ರವಿ ಮೆಂಡೋನ್ಸಾ ಕರೆ ಮಾಡಿ ಪಾವ್ಲಿನ್ ಸಣ್ಣ ಕಾರಣಕ್ಕೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ತಿಳಿಸಿದ್ದರು. ಆದರೆ ನನ್ನ ಮಗಳ ಮರಣದಲ್ಲಿ ಸಂಶಯ ಇರುವುದಾಗಿ ಅನ್ ಮಿನಿನ್ ಜಡ್ತ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News