ಡಾ. ಎಸ್. ಆರ್. ವಿಘ್ನರಾಜ್ ಗೆ ವಿದ್ವತ್ ಪರಂಪರಾ ಪ್ರಶಸ್ತಿ

Update: 2019-10-16 17:06 GMT

ಬೆಳ್ತಂಗಡಿ: ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕಡಾ. ಎಸ್.ಆರ್.ವಿಘ್ನರಾಜ್ ವಿದ್ವತ್ ಪರಂಪರಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನ.1ರಂದು ಕಾಂತಾವರದಲ್ಲಿ ನಡೆಯಲಿರುವ ಕಾಂತಾವರ ಉತ್ಸವದಲ್ಲಿ ಅವರಿಗೆ ಪಂಡಿತಯಜ್ಞ ನಾರಾಯಣ ಉಡುಪ ಪ್ರತಿಷ್ಠಾನದ ವತಿಯಿಂದ ವಿದ್ವತ್ ಪರಂಪರಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ ಪರಿಣತರಾದ ಡಾ. ವಿಘ್ನರಾಜ, ಎಸ್.ಆರ್. ದಕ್ಷಿಣ ಭಾರತದ ಲಿಪಿಗಳಾದ ಕನ್ನಡ, ತುಳು, ಮಲೆಯಾಳ, ತೆಲುಗು, ನಂದಿನಾಗರಿ ಮತ್ತು ಮರಾಠಿ ಲಿಪಿಗಳಲ್ಲಿರುವ ಹನ್ನೆರಡು ಸಾವಿರಕ್ಕೂ ಮಿಕ್ಕಿ ಜೈನ, ವೈದಿಕ ಮತ್ತು ವೀರಶೈವ ಮತಧರ್ಮಗಳಿಗೆ ಸಂಬಂಧಪಟ್ಟ ಗ್ರಂಥಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News