ಮೂಡುಬಿದಿರೆ : ಪ್ರೆಸ್‍ಕ್ಲಬ್ ಸದಸ್ಯರಿಗೆ ಕೆಎಂಸಿ ಆರೋಗ್ಯ ಕಾರ್ಡ್ ವಿತರಣೆ

Update: 2019-10-16 17:09 GMT

ಮೂಡುಬಿದಿರೆ : ಇಲ್ಲಿನ ಪ್ರೆಸ್‍ಕ್ಲಬ್ ಸದಸ್ಯರಿಗೆ ಕೆಎಂಸಿ ವತಿಯಿಂದ ಉಚಿತವಾಗಿ ಒದಗಿಸಲಾಗಿರುವ ಮಣಿಪಾಲ ಆರೋಗ್ಯ ಕಾರ್ಡ್‍ನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಉಪಪ್ರಬಂಧಕ ಮೋಹನ ಶೆಟ್ಟಿ ಅವರು ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ವಿತರಿಸಿದರು.  

ಪ್ರೆಸ್‍ಕ್ಲಬ್ ಅಧ್ಯಕ್ಷ  ವೇಣುಗೋಪಾಲ್  ಕಾರ್ಡ್‍ನ್ನು ಪಡೆದುಕೊಳ್ಳುವ ಬಗೆ, ಶುಲ್ಕ ವಿವರ, ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು. ಕಳೆದ ಸಾಲಿನಲ್ಲಿ ಸುಮಾರು 2.5 ಲಕ್ಷ ಕಾರ್ಡ್ ನೀಡಲಾಗಿದ್ದು ಈ ಬಾರಿ ಈಗಾಗಲೇ 4 ಲಕ್ಷ ದಷ್ಟು ಮಂದಿ ನೋಂದಣಿ ನಡೆಸಿದ್ದಾರೆ. 5 ಲಕ್ಷ ಮಂದಿಯ ನೋಂದಣಿ ಮಾಡಿಸುವ ಗುರಿ ಇದೆ. ಕಾರ್ಡ್ ಹೊಂದಿರುವವರಿಗೆ ಕೆ.ಎಂ.ಸಿ. ಮಣಿಪಾಲ್, ಮಂಗಳೂರು, ಟಿ.ಎಂ.ಎ. ಪೈ ಆಸ್ಪತ್ರೆ ಕಾರ್ಕಳ, ಉಡುಪಿ, ಗೋವಾದ ಮಣಿಪಾಲ ಹಾಸ್ಪಿಟಲ್ ನಲ್ಲಿ  ಈ ಕಾರ್ಡ್ ಮೂಲಕ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು. ವಾರ್ಷಿಕ ಅಥವಾ ದ್ವೈವಾರ್ಷಿಕ ಶುಲ್ಕದ ವ್ಯವಸ್ಥೆ ಇದೆ ಎಂದರು. 

ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಶ್ರೀನಿವಾಸ ಭಾಗವತ್, ಕಾರ್ಕಳ ತಾಲೂಕು  ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಆರ್.ಬಿ. ಜಗದೀಶ್, ಮೂಡುಬಿದಿರೆ ಪ್ರೆಸ್‍ಕ್ಲಬ್ ಕಾರ್ಯದರ್ಶಿ ಯಶೋಧರ ವಿ. ಬಂಗೇರ ಹಾಗೂ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News