ಇರಾನ್ ಮೇಲೆ ಅಮೆರಿಕದಿಂದ ಸೈಬರ್ ದಾಳಿ?

Update: 2019-10-16 17:16 GMT

ವಾಶಿಂಗ್ಟನ್, ಅ. 16: ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ಸೆಪ್ಟಂಬರ್ 14ರಂದು ದಾಳಿಗಳು ನಡೆದ ಬಳಿಕ, ಅಮೆರಿಕವು ಇರಾನ್ ವಿರುದ್ಧ ಗುಪ್ತ ಸೈಬರ್ ಕಾರ್ಯಾಚರಣೆ ನಡೆಸಿತ್ತು ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ದಾಳಿಗಳನ್ನು ಇರಾನ್ ನಡೆಸಿದೆ ಎಂದು ಅಮೆರಿಕ ಮತ್ತು ಸೌದಿ ಅರೇಬಿಯಗಳು ಆರೋಪಿಸಿವೆ.

ಈ ಸೈಬರ್ ದಾಳಿಯು ಸೆಪ್ಟಂಬರ್ ಕೊನೆಯಲ್ಲಿ ನಡೆಯಿತು ಹಾಗೂ ‘ಅಪಪ್ರಚಾರ’ ಮಾಡುವ ಇರಾನ್‌ನ ಸಾಮರ್ಥ್ಯದ ಮೇಲೆ ಗುರಿಯಿರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸೈಬರ್ ದಾಳಿಯು ಇರಾನ್‌ನ ಹಾರ್ಡ್‌ವೇರ್‌ಗೆ ಹಾನಿ ಮಾಡಿದೆ ಎಂದು ಓರ್ವ ಅಧಿಕಾರಿ ತಿಳಿಸಿದರು, ಆದರೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

ಹೆಚ್ಚಿನ ಸಂಘರ್ಷಕ್ಕೆ ಆಸ್ಪದ ನೀಡದೆ, ಇರಾನ್‌ನ ಆಕ್ರಮಣವನ್ನು ಎದುರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಯಾವ ರೀತಿ ಪ್ರಯತ್ನಿಸುತ್ತಿದೆ ಎನ್ನುವುದನ್ನು ಈ ಸೈಬರ್ ದಾಳಿಯು ಬಹಿರಂಗಪಡಿಸಿದೆ.

ತಾನು ಈ ದಾಳಿ ನಡೆಸಿಲ್ಲ ಎಂದು ಇರಾನ್ ಹೇಳುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News