ಅಮೆರಿಕ-ಇರಾನ್ ಯುದ್ಧ ಸಾಧ್ಯತೆ ಬಗ್ಗೆ ಕತರ್‌ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-10-17 06:32 GMT

ದೋಹಾ (ಖತರ್), ಅ. 16: ತೈಲ ಟ್ಯಾಂಕರ್‌ಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಳಿಕ ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಸಂಭವಿಸುವ ಸಾಧ್ಯತೆಯನ್ನು ಕತರ್‌ನ ರಕ್ಷಣಾ ಸಚಿವ ಖಾಲಿದ್ ಬಿನ್ ಮುಹಮ್ಮದ್ ಅಲ್-ಅಟ್ಟಿಯಾ ಬುಧವಾರ ತಳ್ಳಿ ಹಾಕಿದ್ದಾರೆ.

ಕತರ್ ಅಮೆರಿಕದ ಮಿತ್ರ ದೇಶವಾಗಿದೆ. ಅದೇ ವೇಳೆ, ಅದು ಇರಾನ್ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದೆ.

‘‘ಅಮೆರಿಕ ಮತ್ತು ಇರಾನ್ ನಡುವೆ ಭವಿಷ್ಯದಲ್ಲಿ ಯುದ್ಧ ನಡೆಯುವ ಸಾಧ್ಯತೆ ನನಗೆ ಗೋಚರಿಸುತ್ತಿಲ್ಲ’’ ಎಂದು ದೋಹಾದಲ್ಲಿ ನಡೆದ ಜಾಗತಿಕ ಭದ್ರತಾ ವೇದಿಕೆಯ ಸಮ್ಮೇಳನದಲ್ಲಿ ಹೇಳಿದರು.

‘‘ಯುದ್ಧ ನಡೆದರೆ ಯಾರಿಗೂ ಒಳಿತಾಗುವುದಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News