ಜಮ್ಮು ಕಾಶ್ಮೀರ ವಿಧಾನ ಪರಿಷತ್ತು ರದ್ದು: ಆದೇಶ

Update: 2019-10-17 17:45 GMT

ಶ್ರೀನಗರ, ಅ.17: 116 ಸದಸ್ಯಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಪರಿಷತ್ ರದ್ದುಗೊಳಿಸಿ ಜಮ್ಮು ಕಾಶ್ಮೀರದ ಆಡಳಿತ ಆದೇಶ ಹೊರಡಿಸಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಳಿತ ಪ್ರದೇಶಗಳಾಗಿ ವಿಭಜಿಸುವ ಉಪಕ್ರಮಕ್ಕೆ ಈ ತಿಂಗಳಾಂತ್ಯದಲ್ಲಿ ಚಾಲನೆ ದೊರಕಲಿದ್ದು, ಇದಕ್ಕೂ ಮುನ್ನ ವಿಧಾನ ಪರಿಷತ್ ಅನ್ನು ರದ್ದುಗೊಳಿಸಲಾಗಿದೆ.( ಜಮ್ಮು ಕಾಶ್ಮೀರವು ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದೆ). ಈ ಕುರಿತು ರಾಜ್ಯದ ಆಡಳಿತ ಬುಧವಾರ ರಾತ್ರಿ ಆದೇಶ ಹೊರಡಿಸಿದ್ದು ಎಲ್ಲಾ ಸದಸ್ಯರೂ ಅಕ್ಟೋಬರ್ 22ರೊಳಗೆ ಆಡಳಿತ ವಿಭಾಗಕ್ಕೆ ವಿವರ ಸಲ್ಲಿಸುವಂತೆ ರಾಜ್ಯ ಸರಕಾರದ ಕಾರ್ಯದರ್ಶಿ ಫಾರೂಕ್ ಅಹ್ಮದ್ ಲೋನ್ ಅವರು ಹೊರಡಿಸಿರುವ ಆದೇಶ ಸೂಚಿಸಿದೆ.

ಇದುವರೆಗೆ ಖರೀದಿಸಿರುವ ಎಲ್ಲಾ ವಾಹನಗಳನ್ನೂ ರಾಜ್ಯ ಮೋಟಾರು ಗ್ಯಾರೇಜ್ ಪ್ರಧಾನ ನಿರ್ದೇಶಕರಿಗೆ ವರ್ಗಾಯಿಸುವಂತೆ ಹಾಗೂ ಪರಿಷತ್‌ನ ಕಟ್ಟಡವನ್ನು ಪೀಠೋಪಕರಣ ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳ ಸಹಿತ ಸ್ಥಿರಾಸ್ತಿ ಪ್ರಧಾನ ನಿರ್ದೇಶಕರಿಗೆ ಹಸ್ತಾಂತರ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪರಿಷತ್‌ನ ಕಾರ್ಯಾಲಯದ ಸಹಿತ ಪರಿಷತ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಪತ್ರಗಳನ್ನೂ ಕಾರ್ಯದರ್ಶಿಯವರು ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗೆ ವರ್ಗಾಯಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 1957ರಲ್ಲಿ 36 ಸದಸ್ಯ ಬಲದ ವಿಧಾನಪರಿಷತ್ತು ಅಸ್ತಿತ್ವಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News