ಮೈಕ್ರೋಸಾಫ್ಟ್ ಸಿಇಒ ನಾಡೆಲ್ಲಗೆ ಈ ವರ್ಷ 306 ಕೋಟಿ ರೂ. ವೇತನ

Update: 2019-10-17 17:46 GMT

ಸ್ಯಾನ್‌ಫ್ರಾನ್ಸಿಸ್ಕೊ, ಅ. 17: ಅಮೆರಿಕದ ಸಾಫ್ಟ್‌ವೇರ್ ಕಂಪೆನಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸತ್ಯ ನಾಡೆಲ್ಲ 2019ರ ಹಣಕಾಸು ವರ್ಷದಲ್ಲಿ ಒಟ್ಟು 42.9 ಮಿಲಿಯ ಡಾಲರ್ (ಸುಮಾರು 306 ಕೋಟಿ ರೂಪಾಯಿ) ವೇತನ ಮತ್ತು ಭತ್ತೆ ಪಡೆದಿದ್ದಾರೆ ಎಂದು ಕಂಪೆನಿ ಘೋಷಿಸಿದೆ. ಇದು ಹಿಂದಿನ ವರ್ಷಕ್ಕಿಂತ 66 ಶೇಕಡ ಅಧಿಕವಾಗಿದೆ.

ಅವರು ಮೂಲ ವೇತನದಲ್ಲಿ ಒಂದು ಮಿಲಿಯ ಡಾಲರ್ (ಸುಮಾರು 7.13 ಕೋಟಿ ರೂಪಾಯಿ) ಹೆಚ್ಚಳ ಮತ್ತು ಹೆಚ್ಚಿನ ಶೇರುಗಳನ್ನು ಪಡೆದಿದ್ದಾರೆ.

‘‘ನಾಡೆಲ್ಲ ಅವರ ನಾಯಕತ್ವ ಮತ್ತು ಗ್ರಾಹಕರೊಂದಿಗೆ ವಿಶ್ವಾಸವನ್ನು ಬಲಪಡಿಸುವ ಅವರ ಪ್ರಯತ್ನಗಳಿಂದಾಗಿ ಕಂಪೆನಿಯಲ್ಲಿ ಸಂಸ್ಕೃತಿ ಬದಲಾವಣೆಯಾಗಿದೆ ಹಾಗೂ ನೂತನ ತಂತ್ರಜ್ಞಾನ ಮತ್ತು ಮಾರುಕಟ್ಟೆಗಳಿಗೆ ಪ್ರವೇಶಿಸುವಂತಾಗಿದೆ ಮತ್ತು ವಿಸ್ತರಿರಿಸಲು ಸಾಧ್ಯವಾಗಿದೆ’’ ಎಂದು ಮೈಕ್ರೋಸಾಫ್ಟ್‌ನ ಸ್ವತಂತ್ರ ನಿರ್ದೇಶಕರು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

2014ರಲ್ಲಿ ಅವರು ಸ್ಟೀವ್ ಬಾಲ್ಮರ್‌ರಿಂದ ಅಧಿಕಾರ ಸ್ವೀಕರಿಸಿದ ವರ್ಷದಲ್ಲಿ 84.3 ಮಿಲಿಯ ಡಾಲರ್ (ಸುಮಾರು 600 ಕೋಟಿ ರೂಪಾಯಿ) ವೇತನ ಪಡೆದಿದ್ದರು. ಇದು ಅವರು ಈವರೆಗೆ ವರ್ಷವೊಂದರಲ್ಲಿ ಗಳಿಸಿದ ಅತ್ಯಧಿಕ ಸಂಪಾದನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News