ನ. 21ರಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಜುಬೈಲ್ ಘಟಕ ಉದ್ಘಾಟನೆ

Update: 2019-10-18 15:55 GMT

ಜುಬೈಲ್: ನವೆಂಬರ್ 21ರಂದು ನಡೆಯಲಿರುವ  ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿ ಸಿ ಸಿ ಐ) ನ ಜುಬೈಲ್ ಘಟಕದ ಉದ್ಘಾಟನಾ ಸಮಾರಂಭದ ಪೂರ್ವ ತಯಾರಿ ಸಭೆಯು ಗುರುವಾರ ಇಲ್ಲಿನ ಫನಾತೀರ್ ನಲ್ಲಿರುವ ಗೋಲ್ಡನ್ ಫಿಶ್ ರೆಸ್ಟಾರೆಂಟ್ ನಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಲ್ ಮುಝೈನ್ ಕಂಪೆನಿಯ ಮಾಲಕ ಹಾಗೂ ಬಿ ಸಿ ಸಿ ಐ ಉಪಾಧ್ಯಕ್ಷ ಝಕರಿಯಾ ಜೋಕಟ್ಟೆ  "ಬ್ಯಾರಿ ಸಮುದಾಯದ ಅಭಿವೃದ್ಧಿಯ ಉದ್ದೇಶದೊಂದಿಗೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡಲಾಗಿತ್ತು. ಯುಎಇ ಯಲ್ಲೂ ಕಳೆದ ವರ್ಷ ಬಿ ಸಿ ಸಿ ಐ ಘಟಕವನ್ನು ಆರಂಭಿಸಲಾಗಿತ್ತು. ಇದೀಗ ನವೆಂಬರ್ ನಲ್ಲಿ ಜುಬೈಲ್ ನಲ್ಲೂ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ", ಎಂದರು.

ಸಭೆಯಲ್ಲಿ ಪವರ್ ಪಾಯಿಂಟ್  ವಿಷಯ ಮಂಡನೆ ಮಾಡಿದ ಬ್ಯಾರೀಸ್ ಚೇಂಬರ್ಸ್ ನ ಕಾರ್ಯನಿರ್ವಾಹಕ ಸಮಿತಿ ಸದಸ್ಯ,  ಅಮ್ಯಾಕೋ ಕಂಪೆನಿ ಮಾಲಕ ಮೊಹಮ್ಮದ್ ಆಸಿಫ್, ಬ್ಯಾರಿಗಳು ಒಂದು ನಿರ್ದಿಷ್ಠ ಕ್ಷೇತ್ರಕ್ಕೆ ಅಂಟಿಕೊಳ್ಳುವುದನ್ನು ತ್ಯಜಿಸಬೇಕು. ಬದಲಾಗಿ ಭಿನ್ನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದನ್ನು ಕಲಿತುಕೊಳ್ಳಬೇಕು. ಹೊಸ ಹೊಸ ಕ್ಷೇತ್ರಗಳನ್ನು ಆಯ್ದು ಕೊಳ್ಳುವ ಮೂಲಕ ಉದ್ಯಮ ರಂಗದಲ್ಲಿ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಬೇಕು ಎಂದರು.

''ಜುಬೈಲ್ ಬ್ಯಾರಿಗಳಿಗೆ ಕೈಗಾರಿಕಾ ರಾಜಧಾನಿಯಾಗಿದೆ. ಇಲ್ಲಿ ವ್ಯಾಪಾರೋದ್ಯಮಗಳಲ್ಲಿ  ಪರಸ್ಪರ ಸಹಕಾರದೊಂದಿಗೆ ಮತ್ತು ಸಕಾರಾತ್ಮಕ ವಾಗಿ ಬ್ಯಾರಿಗಳು ತೊಡಗಿಕೊಳ್ಳುವುದರಿಂದ ಇಡೀ ಸಮುದಾಯ ಮುಂದುವರಿಯಬಹುದಾಗಿದೆ. ವ್ಯಾಪಾರ ನೀತಿ ಮತ್ತು ಅನಾರೋಗ್ಯಕರ ಸ್ಪರ್ಧೆಯ ಕುರಿತು  ಜಾಗೃತಿ ಮೂಡಿಸುವುದು, ಅನಿವಾಸಿ ಭಾರತೀಯ ಬ್ಯಾರಿಗಳ ವ್ಯಾಪಾರೋದ್ಯಮಗಳಿಗೆ ಬಂಡವಾಳ ಹೂಡಿಕೆ ಮಾಡು ವುದು, ಮಂಗಳೂರಿನಲ್ಲಿ ಸಣ್ಣ ಕೈಗಾರಿಕೆ ಗಳಿಗೆ ಉತ್ತೇಜನ ನೀಡುವುದು, ಕಾರ್ಪೊರೇಟ್ ಬ್ಯುಸಿನೆಸ್ ಗೆ ಒತ್ತು ಕೊಡುವುದು ಬಿ ಸಿ ಸಿ ಐ ಉದ್ದೇಶಗಳಲ್ಲಿ ಕೆಲವಾಗಿದೆ" ಎಂದು ಅವರು ತಿಳಿಸಿದರು.

 ಹಿದಾಯ ಫೌಂಡೇಶನ್ ನ ಅಧ್ಯಕ್ಷ ಮತ್ತು  ಬಿಸಿಸಿಐ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಕಾಸಿಂ ಅಹ್ಮದ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮತ್ತು ಬಿಸಿಸಿಐ ಕಾರ್ಯ ನಿರ್ವಾಹಕ ಸಮಿತಿ ಸದಸ್ಯ ಫಾರೂಕ್ ಮುಲ್ಕಿ ಉಪಸ್ಥಿತರಿದ್ದರು.

ಸಭೆಯಲ್ಲಿ ನವೆಂಬರ್ 21ರ ಸಭೆಯ ಭಿತ್ತಿ ಪಾತ್ರವನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಪ್ರಶ್ನೋತ್ತರ ಅವಧಿಯನ್ನು ನಿಗದಿಗೊಳಿಸಲಾಗಿತ್ತು. ಸುಮಾರು 40 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಕೀಲ್ ಫಾರೂಕ್ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು.

ಬಿಸಿಸಿಐ ಕಾರ್ಯ ನಿರ್ವಾಹಕ ಸಮಿತಿ ಸದಸ್ಯ ಅಬ್ದುಲ್ ಬಶಿರ್ ಸ್ವಾಗತಿಸಿ, ಎಕ್ಸ್ ಪರ್ಟೈಸ್ ಮಾಲಕ ಹಾಗೂ ಬಿಸಿಸಿಐ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ವಂದಿಸಿದರು. ಮುಹಮ್ಮದ್ ಫಿರೋಝ್ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News