ಗೀತಾಂಜಲಿ ಸಿಲ್ಕ್ಸ್ ನಾಲ್ಕನೆ ವರ್ಷಕ್ಕೆ ಪಾದಾರ್ಪಣೆ, ದೀಪಾವಳಿ ಉತ್ಸವ ಉದ್ಘಾಟನೆ

Update: 2019-10-18 14:04 GMT

ಉಡುಪಿ, ಅ.18: ಕರಾವಳಿ ಕರ್ನಾಟಕದ ಅತಿ ದೊಡ್ಡ ಬಟ್ಟೆಯ ಮಳಿಗೆ ಯಾದ ಉಡುಪಿಯ ಗೀತಾಂಜಲಿ ಸಿಲ್ಕ್ಸ್‌ನ ನಾಲ್ಕನೆ ವರ್ಷಕ್ಕೆ ಪಾದಾರ್ಪಣೆ ಮತ್ತು ದೀಪಾವಳಿ ಉತ್ಸವ ಕಾರ್ಯಕ್ರಮವನ್ನು ಮಾಂಡವಿ ಡೆವಲಪರ್ಸ್‌ನ ಮಾಲಕ ಜೆರ್ಸಿ ವಿನ್ಸೆಂಟ್ ಡಯಾಸ್ ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇಶದಲ್ಲಿರುವ ಎಲ್ಲ ರೀತಿಯ ಉಡುಪು ಗಳನ್ನು ಗೀತಾಂಜಲಿ ಸಿಲ್ಕ್ಸ್‌ನ ಒಂದೇ ಸೂರಿನಡಿ ಖರೀದಿಸಲು ಸಾಧ್ಯ. ಉತ್ತಮ ಸೇವೆ ನೀಡುವ ಮೂಲಕ ಗೀತಾಂಜಲಿ ಸಿಲ್ಕ್ಸ್ ಗ್ರಾಹಕರ ಸ್ನೇಹವನ್ನು ಗಳಿಸಿದೆ. ಸಿಬ್ಬಂದಿ ಮತ್ತು ಆರ್.ಕೆ.ಸಹೋದರರ ಅವಿರತ ಶ್ರಮದಿಂದ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

ಗಿರಿಗಿಟ್ ಚಲನಚಿತ್ರದ ಸಂಗೀತ ನಿರ್ದೇಶಕ ಜೋಯೆಲ್ ರೆಬೆಲ್ಲೊ, ಉಜ್ವಲ್ ಡೆವಲಪರ್ಸ್‌ ಮಾಲಕ ಪುರುಷೋತ್ತಮ ಶೆಟ್ಟಿ, ಇಂಡಿಯನ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಗೋಪಿಕೃಷ್ಣನ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರಹ್ಮಾನ್ ಶುಭ ಹಾರೈಸಿದರು.

ಆರ್.ಕೆ.ಸಹೋದರರು ಮತ್ತು ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮಾಲಕ ರಾಮಕೃಷ್ಣ ನಾಯಕ್ ಸ್ವಾಗತಿಸಿದರು. ಯಶೋಧಾ ಕೇಶವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನೆಲಮಹಡಿ ಸೇರಿದಂತೆ ನಾಲ್ಕು ಮಹಡಿಗಳಲ್ಲಿ ಎಲ್ಲ ವಯೋಮಾನದವರ ಪ್ರತ್ಯೇಕ ವಿಭಾಗಗಳಿದ್ದು, ಪುರುಷರ ಫ್ರಾಬ್ರಿಕ್ಸ್, ಸಿಲ್ಕ್, ಕಾಟನ್, ಧೋತಿ, ಬ್ರಾಂಡೆಡ್ ಸಿದ್ಧ ಉಡುಪುಗಳು, ಸಾಂಪ್ರಾದಾಯಿಕ ಉಡುಗೆ, ಮಹಿಳೆಯರ ಕಾಂಜೀವರಂ ಸಿಲ್ಕ್ ಸೀರೆ, ಡಿಸೈನರ್ ಸೀರೆ, ಕಾಟ್ನ್ ಸೀರೆ, ಫ್ಯಾನ್ಸಿ ಸೀರೆ, ವಿಶೇಷವಾಗಿ ಮಹಿಳೆಯರಿಗಾಗಿ ಪಿಕ್ ಆ್ಯಂಡ್ ಚಾಯ್ಸಿನಡಿ ಡ್ರೆಸ್ ಮೆಟಿರಿ ಯಲ್ಸ್, ವೆರ್ಸ್ಟ್ನ್ ಟಾಪ್ಸ್, ಗಾಗ್ರಾ ಚೋಲಿ, ಚೂಡಿದಾರ್, ಫ್ಯಾನ್ಸಿ, ಶರ್ಟ್ಸ್ಸ್/ ಟಾಪ್ಸ್, ಲೆಹೆಂಗಾ, ಜೀನ್ಸ್, ಕುರ್ತಿಸ್, ಲೆಗ್ಗಿನ್ಸ್ ಮತ್ತು ಮಕ್ಕಳ ಸಿದ್ಧ ಉಡುಪು ಗಳ ಸಂಗ್ರಹ ಇಲ್ಲಿದೆ.

ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆಯೊಂದಿಗೆ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ಕೊಡುವ ಮೂಲಕ ಡಬಲ್ ಬೆನಿಫಿಟ್ ದೊರಕಲಿದೆ. ಪ್ರತ್ಯೇಕ ಹೊಲಿಗೆ ಕೇಂದ್ರ, ನೆಲಮಹಡಿಯಲ್ಲಿ ನ್ಯೂ ಶಾಂತಿ ಸಾಗರ್ ರೆಸ್ಟೋರೆಂಟ್, ಶೋರೂಮ್‌ನ ನೆಲ ಅಂತಸ್ತಿನಲ್ಲಿ ವಿಶಾಲ ವಾದ 120 ವಾಹನಗಳ ವ್ಯಾಲೆಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಳಿಗೆ ರವಿವಾರವೂ ತೆರೆದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News