ಮೆಸ್ಕಾಂ ಎಚ್‌ಟಿ ಗ್ರಾಹಕರ ಸಂವಾದ ಕಾರ್ಯಕ್ರಮ

Update: 2019-10-18 14:35 GMT

 ಉಡುಪಿ, ಅ.18: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯ ಮಿತ ಮೆಸ್ಕಾಂ ವತಿಯಿಂದ ಎಚ್.ಟಿ.ಗ್ರಾಹಕರ ಸಂವಾದ ಕಾರ್ಯಕ್ರಮ ಮಂಗಳವಾರ ಅಂಬಲಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸ್ನೇಹಲ್ ಮಾತನಾಡಿ, ನಿರಂತರ ವಿದ್ಯುತ್ ಪೂರೈಕೆ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮೆಸ್ಕಾಂ ಸದಾ ಸಿದ್ದವಾಗಿದೆ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ತಾಂತ್ರಿಕ ನಿರ್ದೇಶಕ ರಘು ಪ್ರಕಾಶ, ಶ್ರೀನಿವಾಸ ಆರ್.ಎಸ್.ಜಂಬಗಿ, ಎಂ.ಟಿ.ಶರಣಪ್ಪ, ನಾಗರಾಜ, ರವಿಕಾಂತ್ ಕಾಮತ್, ಜಾವೇದ್ ರಬ್ಬನಿ ಉಪಸ್ಥಿತರಿದ್ದರು.

ಪದ್ಮಾವತಿ ಸ್ವಾಗತಿಸಿದರು. ಉಡುಪಿ ಅಧೀಕ್ಷಕ ನರಸಿಂಹ ಪಂಡಿತ್ ವಂದಿಸಿ ದರು. ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಮೆಸ್ಕಾಂ ವೃತ ಕಛೇರಿಯ ಅಧಿಕಾರಿಗಳು, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು ಪರಿಸರದ ಎಚ್.ಟಿ. ಗ್ರಾಹಕರು ತಮ್ಮ ಸಲಹೆ ಸೂಚನೆ ಹಾಗೂ ಸಮಸ್ಯೆಗಳನ್ನು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News