ಸರ್ವಧರ್ಮ ಭಾವೈಕ್ಯತೆಯ ಸಂಗಮದ ದೀಪಾವಳಿ: ಐವನ್ ಡಿಸೋಜ

Update: 2019-10-18 14:51 GMT

ಮಂಗಳೂರು, ಅ.18: ಪ್ರತಿ ವರ್ಷದಂತೆ ಈ ಬಾರಿಯೂ 4ನೇ ಬಾರಿಯ ಸರ್ವಧರ್ಮ ಭಾವೈಕ್ಯತೆಯ ಸಂಗಮದ ದೀಪಾವಳಿ ಹಬ್ಬ ಆಚರಣೆಯು ಅ.23ರಂದು ಸಂಜೆ 3 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಸಂಜೆ 3 ಗಂಟೆಗೆ ಪುರಭವನದಲ್ಲಿ ಸ್ಪರ್ಧೆಗಳು ನಡೆಯಲಿವೆ. ‘ದೀಪಾವಳಿ ಹಬ್ಬದ ಔಚಿತ್ಯತೆ ಮತ್ತು ಸೌಹಾರ್ದತೆ’ ಎಂಬ ವಿಚಾರದ ಕುರಿತು ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ 150 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ‘ದೀಪಾವಳಿ ಹಬ್ಬದ ವೈಶಿಷ್ಟ್ಯತೆ ಕಲ್ಪನೆ’ ವಿಚಾರದ ಕುರಿತು ಶಾಲೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 100ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಐವನ್ ಡಿಸೋಜ ತಿಳಿಸಿದರು.

ದೀಪಾವಳಿ ಹಬ್ಬದಂದು ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಹೆಸರು ನೋಂದಣಿಗೆ ಮೊ. ಸಂ: 9341758428/ 9113849926ನ್ನು ಸಂಪರ್ಕಿಸಬಹುದು ಎಂದರು.

ಸರ್ವ ಧರ್ಮ ಸಂಗಮ: ಸರ್ವ ಧರ್ಮಗಳ ಸೌಹಾರ್ದ ಕಾರ್ಯಕ್ರಮವು ಸಂಜೆ 5 ಗಂಟೆಗೆ ನಡೆಯಲಿದ್ದು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಯುಟಿ ಖಾದರ್, ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಹೋ ಭಾಗವಹಿಸುತ್ತಾರೆ. ಈ ಸಂದರ್ಭ ವಿಧಾನ ಪರಿಷತ್ ಸದಸ್ಯನಾಗಿ 5ನೇ ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಪುಸ್ತಕ ಬಿಡುಗಡೆಯಾಗಲಿದೆ. 500 ಕ್ಕೂ ಅಧಿಕ ಮಂದಿಗೆ ತಲಾ 5 ಕೆಜಿ ಅಕ್ಕಿ ವಿತರಿಸಲಾಗು ವುದು. ಇದಕ್ಕೆ ಮಾಜಿ ಸಚಿವ ರಮಾನಾಥ ರೈ ಚಾಲನೆ ನೀಡಲಿದ್ದಾರೆ ಎಂದು ಐವನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News