ಮಂಗಳೂರು ನಗರ ದಕ್ಷಿಣ ಕ್ಷೇತ್ರ: ಒಂದೇ ದಿನ 72 ಕಡೆಗಳಲ್ಲಿ ಅಬಿವೃದ್ಧಿ ಕಾಮಗಾರಿಗೆ ಚಾಲನೆ

Update: 2019-10-18 14:56 GMT

ಮಂಗಳೂರು, ಅ.18: ಶಾಸಕ ವೇದವ್ಯಾಸ್ ಕಾಮತ್‌ರ ಸೂಚನೆಯ ಮೇರೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 72 ಕಡೆಗಳಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳೀಯ ಮುಖಂಡರು ಚಾಲನೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್, ಲೋಕೋಪಯೋಗಿ ಇಲಾಖೆಯಿಂದ 6.29 ಕೋ.ರೂ.ವೆಚ್ಚದಲ್ಲಿ 28 ಕಾಮಗಾರಿಗಳು, ಸಾಮಾನ್ಯ ನಿಧಿ ಅನುದಾನದಡಿ 2.13 ಕೋ.ರೂ. ವೆಚ್ಚದಲ್ಲಿ 24 ಕಾಮಗಾರಿಗಳು, 1.19 ಕೋ.ರೂ.ವೆಚ್ಚದಲ್ಲಿ ಮಳೆಹಾನಿಗೆ ಸಂಬಂಧಪಟ್ಟ ಕಾಮಗಾರಿಗಳು ಹಾಗೂ 5.6 ಕೋ.ರೂ. ವೆಚ್ಚದಲ್ಲಿ ಕೈಗಾರಿಕಾ ವಲಯದ ಅಭಿವೃದ್ಧಿ ಕಾಮಗಾರಿಗಳ ಸಹಿತ ಒಟ್ಟು 15.26 ಕೋ.ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಚಾಲನೆಯು ಶಾಸಕರಿಂದಲೇ ನೆರವೇರಬೇಕು ಎನ್ನುವ ಹಳೆಯ ಸಂಪ್ರದಾಯವನ್ನು ಮುರಿದು ಈ ಎಲ್ಲಾ ಕಾಮಗಾರಿಗಳನ್ನು ಸ್ಥಳೀಯರ ಮೂಲಕವೇ ನೆರವೇರಿಸಲಾಗಿದೆ ಎಂದರು.

ನಾವೀಗ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತಿದ್ದೇವೆ. ಸರ್ವರನ್ನೂ ಜೊತೆ ಸೇರಿಸಿಕೊಂಡು ಕ್ಷೇತ್ರಾಭಿವೃದ್ಧಿಯ ದೃಷ್ಟಿಯಿಂದ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗಿದೆ. ಮುಂದಿನ ಅವಧಿಯ ಒಳಗಾಗಿ ಮಂಗಳೂರನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸುವ ಮೂಲಕ ತನ್ನ ಜವಾಬ್ದಾರಿ ಯನ್ನು ನಿಭಾಯಿಸುತ್ತೇನೆ. ಸರಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಲಿದೆ ಎಂದು ಕಾಮತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News