ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು

Update: 2019-10-18 15:10 GMT

ಮಂಗಳೂರು :  ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳಿಗಿದು ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮ. ವರ್ಷದ ಹಿಂದೆ ಆರಂಭಗೊಂಡ ಶತಮಾನೋತ್ಸವ ಕಾರ್ಯಕ್ರಮಗಳ ಸಂಭ್ರಮಕ್ಕೆ  ನ. 15,16,17ರಂದು ಉದ್ಘಾಟನೆ, ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ನೂರು ವರುಷ ಹಳೆಯದಾಗಿದ್ದ ಶಾಲಾ ಕಟ್ಟಡ ನವೀಕರಣಗೊಂಡು, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಲ್ಲೇ ಪುನರಾರಂಭ ವಾಗಿದೆ. ಕಾಲಮಾನದ ಬೇಡಿಕೆಯಂತೆ ಆಂಗ್ಲಮಾಧ್ಯಮ ಪ್ರೌಢಶಾಲೆಯೂ ಸಮೀಪದಲ್ಲೇ ನೂತನ ಕಟ್ಟಡದಲ್ಲಿ ತೆರೆದಿದ್ದು, ಈ ವರ್ಷದ ಎಸ್.ಎಸ್.ಎಲ್.ಸಿ. ಬ್ಯಾಚ್ ನೂರು ಶೇಕಡಾ ಫಲಿತಾಂಶ ತಂದಿದೆ.

ಬೋವತನದಿಂದ ಘಟ್ಟವಿಳಿದು ಕರಾವಳಿಗೆ ಬಂದು ನೆಲೆನಿಂತ ಸಮಾಜವೊಂದು ಶಿಕ್ಷಣ, ಉದ್ಯೋಗ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿ, ಸಾಧನಾಪಥದಲ್ಲಿ ಸಾಗಿದೆ. ಈ ಭವ್ಯ ಚರಿತ್ರೆಯ ಶ್ರೀಕಾರ ಬರೆದ ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶತಮಾನೋತ್ಸವ ಆಚರಣಾ ಸಮಿತಿ ವಿದ್ಯಾಭಿಮಾನಿಗಳಿಂದ ಉದಾರ ದೇಣಿಗೆಯ ನಿರೀಕ್ಷೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News