ಸ್ಕೋಡಾದಿಂದ ಹೊಸ 'ಕೊಡಿಯಾಕ್ ಸ್ಕೌಟ್' ಬಿಡುಗಡೆ: ಕ್ರಿಯಾಶೀಲ, ವಿಶಿಷ್ಟ ಮತ್ತು ಆಕರ್ಷಕ

Update: 2019-10-19 05:25 GMT

* ಕೊಡಿಯಾಕ್ ಸ್ಕೌಟ್ ವಾಹನ ಆರಂಭಿಕ ಕೊಡುಗೆಯಾಗಿ 33.99 ಲಕ್ಷ ರೂ.(ಎಕ್ಸ್ ಶೋರೂಂ) ಲಭ್ಯ.
* ವಿಶಿಷ್ಟ ಸ್ಕೌಟ್ ಬ್ಯಾಡ್ಜ್, ಡ್ಯುಯೆಲ್ ಟೋನ್ ಆರ್ಕಿಟೆಕ್ಚರ್ ಆರ್ (18) ಟ್ರಿನಿಟಿ ಅಲಾಯ್ ವ್ಹೀಲ್, ಸಿಲ್ವರ್ ಡಿಸೈನ್ ಅಂಶಗಳು ಈ ವಿಶಿಷ್ಟ ಆಕರ್ಷಕ ಹಾಗೂ ಶಕ್ತಿಶಾಲಿ ಕೊಡಿಯಾಕ್ ಸ್ಕೌಟ್‍ನ ಆಫ್ ರೋಡ್ ಸಾಮರ್ಥ್ಯಕ್ಕೆ ಪೂರಕವಾಗಿದೆ.
* ಪ್ರಿಮಿಯಂ ಕಪ್ಪು ಆಂತರಿಕ ವಿನ್ಯಾಸ ಹೊಂದಿದ್ದು, ಅಲ್ಕಾಂತರ ಚರ್ಮ ಹಾಗೂ ಮರದ ಅಲಂಕರಣ ಸ್ಕೋಡಾ ಕೋಡಿಯಾಕ್ ಸ್ಕೌಟ್‍ನ ಕ್ರಿಯಾಶೀಲ ನೋಟಕ್ಕೆ ಕಾರಣವಾಗಿದೆ.

* ಸ್ಕೋಡಾ ವಿನ್ಯಾಸ ಪರಿಭಾಷೆಯ ಮುಂದಿನ ಅಭಿವೃದ್ಧಿ ಹಂತ: ಹಿಂಬದಿಯ ಸ್ಕೋಡಾ ಲೋಗೊ ಬದಲಾಗಿ ಬ್ಲಾಕ್ ಲೆಟರಿಂಗ್‍ನಲ್ಲಿ ಸ್ಕೋಡಾ ಎಂದು ಅಳವಡಿಸಿರುವ ಹೊಸ ಕೊಡಿಯಾಕ್ ಸ್ಕೌಟ್ ಭಾರತದಲ್ಲೇ ಮೊದಲ ಉತ್ಪನ್ನವಾಗಿದೆ.
* 4/4 ಚಾಲನೆ, ಆಫ್‍ರೋಡ್ ಮೋಡ್, ಹಿಲ್ ಹೋಲ್ಡ್ ಮತ್ತು ಡೆಸೆಂಟ್ ಕಂಟ್ರೋಲ್, ಇಡಿಎಸ್ ಮತ್ತಿತರ ಅಂಶಗಳು ಸ್ಕೌಟ್ ವಾಹನವನ್ನು ಸಮರ್ಥ ಸಾಹಸ ವಾಹನವನ್ನಾಗಿ ರೂಪಿಸಿದೆ.
* ಸಿಂಪ್ಲಿ ಕ್ಲೆವರ್: ಹ್ಯಾಂಡ್ಸ್ ಫ್ರೀ ಪಾರ್ಕಿಂಗ್, ಪವರ್ ನ್ಯಾಪ್ ಪ್ಯಾಕೇಜ್, ವರ್ಚುವಲ್ ಪೆಡಲ್ ಮತ್ತು ಡಿಜಿಟಲ್ ಧ್ವನಿ ವರ್ಧಕ.
* ಸುರಕ್ಷೆ: ಸ್ಕೌಟ್ ವಾಹನ ಉದ್ಯಮದಲ್ಲೇ ಹೊಸ ಮಾನದಂಡ ಎನಿಸಿದ ಒಂಬತ್ತು ಏರ್ ಬ್ಯಾಗ್ ಹೊಂದಿದ್ದು, ಕಚ್ಚಾ ರಸ್ತೆ ಪ್ಯಾಕೇಜ್ ಮತ್ತು ಐ ಬುಝ್ ಬಳಲಿಕೆ ಎಚ್ಚರಿಕೆ ವ್ಯವಸ್ಥೆ ಒಳಗೊಂಡಿದೆ.
* 2.0 ಟಿಡಿಐ (ಡಿಜಿಎಸ್) ಡೀಸೆಲ್ ಎಂಜಿನ್ ಹೊಂದಿದ ಕೊಡಿಯಾಕ್ ಸ್ಕೌಟ್ ನಾಲ್ಕು ಬಣ್ಣಗಳಲ್ಲಿ ಲಭ್ಯ: ಲಾವಾ ಬ್ಲೂ, ಕ್ವಾರ್ಟ್ಸ್ ಗ್ರೇ, ಮೂನ್ ವೈಟ್ ಮತ್ತು ಮ್ಯಾಜಿಕ್ ಬ್ಲ್ಯಾಕ್.

ಮುಂಬೈ, 30ನೇ ಸೆಪ್ಟೆಂಬರ್, 2019: ಸ್ಕೋಡಾ ಆಟೊ ಇಂಡಿಯಾ ತನ್ನ ಹೊಚ್ಚ ಹೊಸ ಕೊಡಿಯಾಕ್ ಸ್ಕೌಟ್ ವಾಹನ ಅನಾವರಣಗೊಳಿಸಿದ್ದು, ಆರಂಭಿಕ ಕೊಡುಗೆಯಾಗಿ 33.99 ಲಕ್ಷ ರೂ. ದರ ನಿಗದಿಪಡಿಸಲಾಗಿದೆ. 2017ರಲ್ಲಿ ಪರಿಚಯಿಸಲ್ಪಟ್ಟ ಕೊಡಿಯಾಕ್ ವಾಹನ, ಸ್ಕೋಡಾದ ಜನಪ್ರಿಯ ಪೂರ್ಣ ಗಾತ್ರದ ಎಸ್‍ಯುವಿ ವಲಯಕ್ಕೆ ಭಾರತದಲ್ಲಿ ಲಗ್ಗೆ ಇಟ್ಟಿರುವುದನ್ನು ಬಿಂಬಿಸಿದೆ. ಸ್ಕೌಟ್ ಅವತರಣಿಕೆಯು ವಿಶಿಷ್ಟ ವಿನ್ಯಾಸ, ಆಕರ್ಷಕ ನೋಟ, ಉದಾರ ಸ್ಥಳಾವಕಾಶ, ಎಲ್ಲ ಚಕ್ರಗಳ ಚಾಲನೆ ಮತ್ತು ಕಣಿವೆ ಪ್ರದೇಶಗಳಲ್ಲೂ ಸಂಚರಿಸುವ ಸಾಮರ್ಥ್ಯ ದಿಂದಾಗಿ ಮತ್ತಷ್ಟು ಮುನ್ನಡೆ ಸಾಧಿಸಿದೆ. ಶಕ್ತಿಶಾಲಿ ಬಾಡಿ ಫ್ರೇಮ್, ಬೆಳ್ಳಿ ಬಣ್ಣದ ಸುರಕ್ಷಾ ಅಂಶದೊಂದಿಗೆ ಸಹಜ ಸೌಂದರ್ಯ, ಕಠಿಣತೆ ಮತ್ತು ಸಾಹಸಿ ಪ್ರವೃತ್ತಿಯನ್ನು ಪ್ರತಿಫಲಿಸುತ್ತದೆ.

ಕೊಡಿಯಾಕ್ ಸ್ಕೌಟ್ 2.0 ಟಿಡಿಐ (ಡಿಎಸ್‍ಜಿ) ಡೀಸೆಲ್ ಎಂಜಿನ್‍ನಿಂದ ಸುಸಜ್ಜಿತವಾಗಿದ್ದು, ಇದು 150 ಪಿಎಸ್ (110 ಕೆಡಬ್ಲ್ಯು) ಶಕ್ತಿಯನ್ನು ಮತ್ತು ಗರಿಷ್ಠ 340 ಎನ್‍ಎಂ ತೊರಾಕ್ ಒದಗಿಸುತ್ತದೆ. ಏಳು ಆಸನಗಳ ಸ್ಕೋಡಾ ಕೊಡಿಯಾಕ್ ಸ್ಕೌಟ್ ಈ ನಾಲ್ಕು ಬಣ್ಣಗಳಲ್ಲಿ ಲಭ್ಯ: ಲಾವಾ ಬ್ಲೂ, ಕ್ವಾರ್ಟ್ಸ್ ಗ್ರೇ, ಮೂನ್ ವೈಟ್ ಮತ್ತು ಮ್ಯಾಜಿಕ್ ಬ್ಲ್ಯಾಕ್. ದೇಶಾದ್ಯಂತ ಎಲ್ಲ ಸ್ಕೋಡಾ ಆಟೊ ಡೀಲರ್‍ಶಿಪ್‍ಗಳಲ್ಲಿ ಲಭ್ಯ.

ವಾಹನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸ್ಕೋಡಾ ಆಟೊ ಇಂಡಿಯಾದ ಮಾರಾಟ, ಸೇವೆ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಝೆಕ್ ಹೊಲ್ಲಿಸ್, "ವೈವಿಧ್ಯಮಯ ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ವಿಲಾಸಿತನ ಹಾಗು ಹಣಕ್ಕೆ ಮೌಲ್ಯ ಎರಡನ್ನೂ ಒದಗಿಸುತ್ತದೆ. ಭಾರತದಲ್ಲಿ ಕೊಡಿಯಾಕ್ ಸ್ಕೌಟ್ ನಮ್ಮ ಎಸ್‍ಯುವಿ ಅಭಿಯಾನದ ಅವಿಭಾಜ್ಯ ಅಂಗವಾಗಿದೆ. ಪ್ರಬಲ ಕುಟುಂಬ ಗುಣಲಕ್ಷಣಗಳನ್ನು ಉಳಿಸಿಕೊಳ್ಳುವ ಜತೆಗೆ ಭಾವನಾತ್ಮಕ ವಿನ್ಯಾಸ, ಆಕರ್ಷಕ ಒಳಾಂಗಣ, ವರ್ಗದಲ್ಲೇ ಮುಂಚೂಣಿ ಸುರಕ್ಷಾ ಕ್ರಮಗಳು ಮತ್ತು ಇಂಟೆಲಿಜೆಂಟ್ ಸಂಪರ್ಕ ಲಕ್ಷಣಗಳನ್ನು ಹೊಂದಿದೆ" ಎಂದು ಹೇಳಿದರು.

ವಿನ್ಯಾಸ

ಸ್ಕೋಡಾ ಕೊಡಿಯಾಕ್ ಸ್ಕೌಟ್ ತನ್ನ ವಿಶಿಷ್ಟ ನಿಯಂತ್ರಿತ ಕೊಡಿಯಾಕ್ ಬಾಡಿ ಮತ್ತು ಕ್ರಿಯಾಶೀಲ ಅಂಶಗಳನ್ನು ಒಳಗೊಂಡಿದೆ. ವಿಶಿಷ್ಟ ಕ್ರೋಮ್ ಸುತ್ತುವರಿದ ರೇಡಿಯೇಟರ್ ಗ್ರಿಲ್ ಮತ್ತು ಬೆಳ್ಳಿ ಬಣ್ಣದ ಮುಂದಿನ ಬಂಪರ್ ನ ವಿಶಿಷ್ಟ ನೋಟವು ಕೊಡಿಯಾಕ್ ಸ್ಕೌಟ್‍ನ ಆಫ್‍ರೋಡ್ ಸಾಮಥ್ರ್ಯವನ್ನು ಬಿಂಬಿಸುತ್ತದೆ. ವಿಶೇಷ ಎಲ್‍ಇಡಿ ಹೆಡ್‍ಲ್ಯಾಂಪ್ ಹಾಗು ಹೋಲೆಯುವ ಐಲ್ಯಾಷಸ್, ಸ್ಕೌಟ್‍ನ ಒಳಭಾಗದಲ್ಲೂ ಅವಕಾಶ ಪಡೆದಿವೆ. ತೀಕ್ಷ್ಣವಾಗಿ ವಿನ್ಯಾಸ ಮಾಡಲ್ಪಟ್ಟ ಫಾಗ್‍ಲ್ಯಾಫ್ ಗ್ರಿಲ್‍ನ ಎತ್ತರದಲ್ಲಿದ್ದು, ಯಾವುದೇ ಹಾನಿಯಿಂದ ಸುರಕ್ಷಿತವಾಗಿದೆ.

ಕ್ಷಮತೆ

ಸ್ಕೌಟ್ ವಾಹನವು 2.0 ಟಿಡಿಐ (ಡಿಎಸ್‍ಜಿ) ಡೀಸೆಲ್ ಎಂಜಿನ್ ಹೊಂದಿದೆ. 16 ವಾಲ್ವ್ ಡ್ಯುಯೆಲ್ ಓವರ್‍ಹೆಡ್ ಕ್ಯಾಪ್‍ಶಾಫ್ಟ್ (ಡಿಓಎಚ್‍ಸಿ) ನೊಂದಿಗೆ 150 ಪಿಎಸ್ (110 ಕೆಡಬ್ಲ್ಯು) ಶಕ್ತಿ ಹಾಗೂ ಗರಿಷ್ಠ 340 ಎನ್‍ಎಂ ತೊರಾಕ್ ವಿತರಿಸುತ್ತದೆ. ಪ್ರತಿ ಲೀಟರ್ ಗೆ 16.25 ಕಿಲೋಮಿಟರ್ ಇಂಧನ ಕ್ಷಮತೆಯನ್ನು ಹೊಂದಿದ್ದು, ಗಂಟೆಗೆ ಗರಿಷ್ಠ 194 ಕಿಲೋಮೀಟರ್ ವೇಗವನ್ನು ಹೊಂದಿದೆ.

4/4 ಚಾಲನೆ ವ್ಯವಸ್ಥೆಯು ಎಲೆಕ್ಟ್ರೋ ಹೈಡ್ರಾಲಿಕ್ ನಿಯಂತ್ರಿತ ಬಹು ಡಿಸ್ಕ್ ಇಂಟರ್ ಆ್ಯಕ್ಸಿಲ್ ಕ್ಲಚ್ ಹೊಂದಿದ್ದು, ಇದು ಸುಲಲಿತವಾಗಿ ತೊರಾಕ್ ಪ್ರವಾಹವನ್ನು ಮುಂಬದಿ ಹಾಗೂ ಹಿಂಬದಿಯ ಅಚ್ಚುಗಳಿಗೆ 96: 4 ಅನುಪಾತದಿಂದ ಹಿಡಿದು 10% ನಿಂದ 90% ವರೆಗೆ ಹಂಚಿಕೆ ಮಾಡುತ್ತದೆ. ಒಂದೇ ಚಕ್ರಕ್ಕೆ ಶೇಕಡ 85ರಷ್ಟು ತೊರಾಕ್ ಹಂಚಿಕೆ ಮಾಡುವ ವ್ಯವಸ್ಥೆಯನ್ನೂ ಹೊಂದಿದೆ.

ಸುರಕ್ಷೆ ಮತ್ತು ಭದ್ರತೆ

ಇದರ ಸುರಕ್ಷಾ ಕಾರ್ಯಗಳನ್ನು ಏರೊಡೈನಾಮಿಕ್ ವಿಧಾನದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರಿಂದಾಗಿ ವಾಹನದ ಅಡಿಭಾಗದಲ್ಲಿ ಗರಿಷ್ಠ ಗಾಳಿಯ ಹರಿವು ಉಂಟಾಗುತ್ತದೆ. ಚೇಸಿಗಳ ಸುರಕ್ಷತೆಯ ಪ್ರಮಾಣ ಹೆಚ್ಚಿಸಲು ವಾಹನವನ್ನು ಕಠಿಣ ರಸ್ತೆ ಪ್ಯಾಕೇಜ್‍ನೊಂದಿಗೆ ಸುಸಜ್ಜಿತಗೊಳಿಸಲಾಗಿದೆ. ಎಂಜಿನ್‍ಬೇಗೆ ಹೆಚ್ಚುವರಿ ಸುರಕ್ಷೆಯನ್ನು ಹೊಂದಿದ್ದು, ಆಯಿಲ್ ಸಂಪ್, ಗೇರ್ ಬಾಕ್ಸ್, ಹಿಂಬದಿ ಸಸ್ಪೆನ್ಷನ್, ಪರ್ಯಾಯ ಆರ್ಮ್ ಮತ್ತು ಬ್ರೇಕ್ ಹೋಸ್‍ಗಳಿಗೆ ಕೂಡಾ ವಿಶೇಷ ಸುರಕ್ಷೆ ಇರುತ್ತದೆ. ಕಾರಿಗೆ ಐಬುಝ್ ಬಳಲಿಕೆ ಎಚ್ಚರಿಕೆ ವ್ಯವಸ್ಥೆಯೂ ಇದ್ದು, ಚಾಲಕನ ಆಯಾಸದ ಲಕ್ಷಣಗಳನ್ನು ಇದು ಪತ್ತೆ ಮಾಡಿ, ಬಿಡುವು ಪಡೆಯುವಂತೆ ಸೂಚಿಸುತ್ತದೆ.

ಜತೆಗೆ ಅತ್ಯಾಧುನಿಕ ಕಳ್ಳತನ ನಿರೋಧಕ ಅಲರಾಂ ವ್ಯವಸ್ಥೆಯನ್ನು, ಆಂತರಿಕ ಕಣ್ಗಾವಲು, ಟೈರ್ ಒತ್ತಡದ ನಿಗಾ ವ್ಯವಸ್ಥೆ, ಗರಿಷ್ಠ ವೇಗ ಮೀರಿದರೆ ಎಚ್ಚರಿಕೆ ಸಂದೇಶ ಮತ್ತಿತರ ವ್ಯವಸ್ಥೆಗಳನ್ನು ಒಳಗೊಂಡಿದೆ.

ಆರಾಮ ಮತ್ತು ಅನುಕೂಲತೆ

ಅತ್ಯಾಧುನಿಕ 20.32 ಸೆಂಟಿಮೀಟರ್ ಸಾಮರ್ಥ್ಯದ ಸ್ಪರ್ಶ ಪ್ರದರ್ಶಕ ವ್ಯವಸ್ಥೆಯನ್ನು ಹೊಂದಿದ ಗ್ಲಾಸ್ ವಿನ್ಯಾಸವು ಹೊಸ ಪೀಳಿಗೆಯ ಸ್ಕೋಡಾ ಅಭಿವೃದ್ಧಿಪಡಿಸಿದ ಅಮುಂಡ್ಸೆನ್ ಇನ್‍ಫೊಟೈನ್‍ಮೆಂಟ್ ಮತ್ತು ನೇವಿಗೇಶನ್ ಸಿಸ್ಟಂ ಹೊಂದಿದೆ. ಸ್ಮಾರ್ಟ್‍ಲಿಂಕ್+, ಆಲ್ ಇನ್ ವನ್ ತಂತ್ರಜ್ಞಾನವು ಸ್ಮಾರ್ಟ್‍ ಗೇಟ್‍ನೊಂದಿಗೆ ಸಮನ್ವಯಗೊಂಡಿರುವ ವ್ಯವಸ್ಥೆ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೊ, ಮಿರರ್‍ಲಿಂಕ್ ವ್ಯವಸ್ಥೆಯನ್ನು ಹೊಂದಿದೆ. ಪ್ರಿಮಿಯಂ ಕಾಟನ್ ಸೌಂಡ್ ಸಿಸ್ಟಮ್ 10 ಸ್ಪೀಕರ್, ಸಬ್‍ವೂಫರ್ ನಂಥ ವಿಶಿಷ್ಟತೆಗಳನ್ನು ಹೊಂದಿದೆ. ಹೊಸ ಪೀಳಿಗೆಯ ಸಂಪರ್ಕ ಪರಿಹಾರವನ್ನು ಬಾಸ್ ಕನೆಕ್ಟ್ ಸೌಲಭ್ಯವನ್ನೂ ಹೊಂದಿದೆ. ಇದು ಸ್ಕೋಡಾ ಮೀಡಿಯಾ ಕಮಾಂಡ್ ಆ್ಯಪ್‍ನೊಂದಿಗೆ ಸಮನ್ವಯಗೊಂಡಿದೆ. ಇದು ನೇವಿಗೇಶನ್, ಮನೋರಂಜನೆ, ಸಹಾಯ, ಹಿಂಬದಿ ಆಸನದ ಆರಾಮತನಕ್ಕೂ ಕಾರಣವಾಗಿದೆ.

ಸ್ಕೋಡಾ ಜತೆ ಗುಣಮಟ್ಟದ ಮನಶ್ಯಾಂತಿ

ಸ್ಕೋಡಾ ಶೀಲ್ಡ್ ಪ್ಲಸ್ 6 ವರ್ಷಗಳ ಅಡೆತಡೆ ರಹಿತ ಮಾಲೀಕತ್ವ ಅನುಭವವನ್ನು ಖಾತರಿಪಡಿಸುತ್ತದೆ ಹಾಗೂ ಗರಿಷ್ಠ ಮನಶ್ಯಾಂತಿಯನ್ನು ನೀಡುತ್ತದೆ. ಇದು ಮೋಟಾರು ವಿಮೆ, 24/7 ರಸ್ತೆ ಬದಿಯ ನೆರವು, ವಿಸ್ತರಿತ ವಾರಂಟಿಯನ್ನು ಹೊಂದಿದೆ. ಸ್ಕೋಡಾ ಆಟೊ ಈ ಮೊದಲು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ 4 ವರ್ಷಗಳ ಸರ್ವೀಸ್ ಕಾಳಜಿ ಯೋಜನೆಯನ್ನು ಆರಂಭಿಸಿತ್ತು. (ನಾಲ್ಕು ವರ್ಷಗಳ ವಾರಂಟಿ, 4 ವರ್ಷಗಳ ರಸ್ತೆ ಬದಿ ಸಹಾಯ ಮತ್ತು ಐಚ್ಛಿಕವಾಗಿ ನಾಲ್ಕು ವರ್ಷಗಳ ನಿರ್ವಹಣೆ ಪ್ಯಾಕೇಜ್).

ಹೆಚ್ಚಿನ ವಿವರಗಳಿಗೆ ಹಾಗು ಬುಕ್ಕಿಂಗ್ ಗೆ ಸಂಪರ್ಕಿಸಿ 7874334444, 9384822477, 9384822473

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News