ದಿಲ್ಲಿಯಲ್ಲಿ ಮತ್ತೆ ‘ಅತಿ ಕಳಪೆ’ಗೆ ಕುಸಿದ ವಾಯು ಗುಣಮಟ್ಟ

Update: 2019-10-18 16:01 GMT

ಹೊಸದಿಲ್ಲಿ, ಅ. 18: ದಿಲ್ಲಿಯ ವಾಯು ಗುಣಮಟ್ಟ ಶುಕ್ರವಾರ ಬೆಳಗ್ಗೆ ಮತ್ತೆ ‘ಅತಿ ಕಳಪೆ’ ಸ್ಥಿತಿಗೆ ಕುಸಿದಿದೆ. ಬದಲಾಗುತ್ತಿರುವ ಹವಾಮಾನ ಹಾಗೂ ಬೆಳೆ ತ್ಯಾಜ್ಯ ಸುಡುವಿಕೆಯಿಂದ ವಾಯು ಗುಣಮಟ್ಟ ಈ ವಾರಾಂತ್ಯದಲ್ಲಿ ಇನ್ನಷ್ಟು ಕಳಪೆ ಸ್ಥಿತಿಗೆ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ.

ಶುಕ್ರವಾರ ನಗರದ ಒಟ್ಟು ವಾಯು ಗುಣಮಟ್ಟ ಸೂಚ್ಯಾಂಕ 306 ಇತ್ತು. ಗುರುವಾರ 276 ಇತ್ತು. ಒಟ್ಟು ವಾಯು ಗುಣಮಟ್ಟ ಸೂಚ್ಯಾಂಕ ಡಿಟಿಯು, ದ್ವಾರಕ ವಲಯ 8, ನರೇಲಾ, ವಾಝಿಪುರ ಹಾಗೂ ಬಾವನದಲ್ಲಿ ಕ್ರಮವಾಗಿ 312, 316, 310, 312 ಹಾಗೂ 341 ಇದೆ. ಇದು ‘ಅತಿ ಕಳಪೆ’ ವಾಯು ಗುಣಮಟ್ಟದ ಅಡಿಯಲ್ಲಿ ಬರುತ್ತದೆ. ವಾಯು ಗುಣಮಟ್ಟ ಸೂಚ್ಯಂಕ 0 ಹಾಗೂ 50ರ ನಡುವೆ ಉತ್ತಮ, 51 ಹಾಗೂ 100ರ ನಡುವೆ ಸಮಾಧಾನಕರ, 101 ಹಾಗೂ 200ರ ನಡುವೆ ಮಧ್ಯಮ, 201 ಹಾಗೂ 300ರ ನಡುವೆ ಕಳಪೆ, 301 ಹಾಗೂ 400ರ ನಡುವೆ ಅತಿ ಕಳಪೆ, 401 ಹಾಗೂ 500ರ ನಡುವೆ ಗಂಭೀರ ಎಂದು ಪರಿಗಣಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News