ಉಡುಪಿ: ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿ

Update: 2019-10-18 16:33 GMT

ಉಡುಪಿ, ಅ.18: ಗುರುವಾರ ಸಂಜೆ ವೇಳೆ ಮಳೆ-ಗಾಳಿಯೊಂದಿಗೆ ಸಿಡಿಲು ಬಡಿದು ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ಹಲವು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಹಲವು ಮನೆಗಳಿಗೆ ಸಿಡಿಲಿನಿಂದ ಭಾರೀ ಪ್ರಮಾಣ ಹಾನಿ ಸಂಭವಿಸಿದೆ. ಲಿಗೋರಿ ಡಿಸೋಜ ಅವರು ಜಾನುವಾರು ಕೊಟ್ಟಿಗೆಗೆ 10ಸಾವಿರ, ಲಾರೆನ್ಸ್ ಡಿಸೋಜ ಅವರ ವಾಸದ ಮನೆಗೆ 25ಸಾವಿರ, ನರಸಿಂಹ ಶೇರಿಗಾರ್ ಮನೆಗೆ 20 ಸಾವಿರ, ಚಂದ್ರ ಬಂಗೇರ ವಾಸದ ಮನೆಗೆ 50ಸಾವಿರ, ರತ್ನಾವತಿ ಅವರ ಮನೆಗೆ 35 ಸಾವಿರ, ಲಚ್ಚ ಪೂಜಾರ್ತಿ ಮನೆಗೆ 10 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದರೆ, ರಾಜೀವ್ ಪುತ್ರನ್ ವಾಸದ ಮನೆ ಮೇಲೆ ಮರ ಬಿದ್ದು 80,000ರೂ.ನಷ್ಟ ಸಂಭವಿಸಿದೆ. ಬಳ್ಕೂರಿನ ನಾರಾಯಣ ಇವರ ಅಡಿಕೆ ತೋಟ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು 75,000 ರೂ.ನಷ್ಟ ಸಂಭವಿಸಿದೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಚಂದ್ರಯ್ಯ ಹೆಗ್ಡೆ ಅವರ ವಾಸದ ಮನೆ ಹಾಗೂ ಪುಷ್ಪ ಇವರ ಮನೆಗೆ ಸಿಡಿಲು ಬಡಿದು ತಲಾ 10ಸಾವಿರ, ಮರ್ಣೆ ಗ್ರಾಮದ ಅಚ್ಯುತ ನಾಯಕ್ ಮನೆಗೆ20 ಸಾವಿರ ನಷ್ಟವಾದರೆ, ಕುಕ್ಕುಂದೂರು ಗ್ರಾಮದ ಸೋಮಶೇಖರ್ ಅವರಿಗೆ ಸಿಡಿಲು ಬಡಿದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರ್ಕಳ ಗ್ರಾಮದ ಬೆಳಪು ಗ್ರಾಮದ ಸತೀಶ್ ಆಚಾರ್ಯರ ಮನೆಗೆ ತೆಂಗಿನ ಮರ ಬಿದ್ದು ನಷ್ಟ ಸಂಭವಿಸಿದರೆ, ದುರ್ಗಾ ಗ್ರಾಮದ ಜೀನತ್ ಬಾನು ಮನೆಗೆ ಒಂದು ಲಕ್ಷ ರೂ.ನಷ್ಟ ಸಂಭವಿಸಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಉಡುಪಿ ಜಿಲ್ಲೆಯಲ್ಲಿ ಸರಾಸರಿ 46.20ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 41ಮಿ.ಮೀ., ಕುಂದಾಪುರ ದಲ್ಲಿ 39.4ಮಿ.ಮೀ. ಹಾಗೂ ಕಾರ್ಕಳದಲ್ಲಿ 60.8ಮಿ.ಮೀ. ಮಳೆ ಸುರಿದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News