ಮಹಿಳೆಯರಿಗೆ ಅಸಭ್ಯ ವರ್ತನೆ: ಯುವಕನ ಬಂಧನ

Update: 2019-10-18 17:03 GMT

ಮಣಿಪಾಲ, ಅ.18: ಮಣಿಪಾಲದ ಜಿಲ್ಲಾಧಿಕಾರಿ ರಸ್ತೆಯ ಕಂಟ್ರಿ ಇನ್ ಹೋಟೆಲ್ ಸಮೀಪ ಅ.18ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ಮಹಿಳೆ ಯರಿಗೆ ಅಸಭ್ಯವಾಗಿ ಸಂಜ್ಞೆ ಮಾಡುತ್ತಿದ್ದ ಯುವಕನೋರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಅಜೆಕಾರು ಮರ್ಣೆ ಮಂಗಳನಗರದ ಪ್ರಶಾಂತ ಮೂಲ್ಯ(35) ಬಂಧಿತ ಆರೋಪಿ.

ಈತ ಸ್ವಿಗ್ಗಿ ಫುಡ್ ಡೆಲಿವರಿಯ ಬಟ್ಟೆ ಧರಿಸಿಕೊಂಡು ಬೈಕಿನ ಮೇಲೆ ಕುಳಿತು ಶಿಳ್ಳೆ ಹೊಡೆದು ರಸ್ತೆಯಲ್ಲಿ ಹೋಗುತ್ತಿರುವ ಮಹಿಳೆ ಯರಿಗೆ ಕೇಳುವಂತೆ ಹಾಡು ಹೇಳಿ, ಕೈಯಿಂದ ಅಸಭ್ಯವಾಗಿ ಸಂಜ್ಞೆ ಮಾಡುತ್ತಿದ್ದು, ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಶಾಂತ್ ಮೂಲ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News