ದರ್ಬೆ: 'ಯುನೈಟೆಡ್ ಹೋಂ ಡೆಕೋರ್' ಶುಭಾರಂಭ

Update: 2019-10-18 17:11 GMT

ಪುತ್ತೂರು, ಅ. 18: ಅತ್ಯಾಧುನಿಕ ಶೈಲಿಯ ಅಲಂಕಾರಿಕ ಗೃಹೋಪಯೋಗಿ ವಸ್ತುಗಳ ಬೃಹತ್ ಶೋರೂಂ 'ಯುನೈಟೆಡ್ ಹೋಂ ಡೆಕೋರ್' ದರ್ಬೆ ಸರ್ಕಲ್ ಸಮೀಪದ ರಹಿಮ್ಸ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಮಳಿಗೆಯನ್ನು ಸೈಯದ್ ಕೆ.ಎಸ್ ಅಲಿ ತಂಙಳ್ ಕುಂಬೋಳ್ ಉದ್ಘಾಟಿಸಿ, ಶುಭ ಹಾರೈಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು,ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಸಮಾಜ ಸದಾ ಹೊಸತನಕ್ಕೆ ಹವಣಿಸುತ್ತಿರುವ ಸಂದರ್ಭದಲ್ಲಿ ಆಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳ ಮಳಿಗೆ ದರ್ಬೆಯಲ್ಲಿ ಪ್ರಾರಂಭ ಗೊಂಡಿರುವುದು ಸಂತಸದ ವಿಚಾರ, ಹೊಸ ಹೊಸ ಉದ್ಯಮಗಳು ಪ್ರಾರಂಭಗೊಳ್ಳುತ್ತಿರುವುದು ಬೆಳೆಯುತ್ತಿರುವ ಪುತ್ತೂರಿಗೆ ವರದಾನವಾಗಿದೆ. ಇಲ್ಲಿ ಆರಂಭಗೊಂಡಿರುವ ಯುನೈಟೆಡ್ ಹೋಂ ಡೆಕೋರ್ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಯುನೈಟೆಡ್ ಹೋಂ ಡೆಕೋರ್ ಶೋರೂಂನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಶೋರೂಂಗಳು ಪುತ್ತೂರಿಗೆ ಅಗತ್ಯ ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ವ್ಯವಹಾರದಲ್ಲಿ ಉತ್ತಮ ಹಿನ್ನೆಲೆ ಹೊಂದಿರುವ ಹನೀಫ್ ಮಧುರಾ ಮತ್ತು ತಂಡದವರು ಆರಾಂಭಿಸಿರುವ ಯುನೈಟೆಡ್ ಹೋಂ ಡೆಕೋರ್ ಸಂಸ್ಥೆ ಮುಂದಕ್ಕೆ ಮಂಗಳೂರು, ಬೆಂಗಳೂರು ಮೊದಲಾದ ಕಡೆಗಳಲ್ಲೂ ಶಾಖೆ ತೆರೆಯುವಂತಾಗಲಿ ಎಂದು ಆಶಿಸಿದರು.

ಎಂಪವರ್ ಪ್ರಾಪರ್ಟಿಸ್‍ನ ಮೆನೇಜಿಂಗ್ ಡೈರೆಕ್ಟರ್ ಅಬ್ದುಲ್ ಲತೀಫ್ ಮಾತನಾಡಿ, ಪುತ್ತೂರಿನ ಹಿರಿಮೆಗೆ ಯುನೈಟೆಡ್ ಸಂಸ್ಥೆ ಗರಿ ಸೇರಿಸಿದೆ, ವ್ಯಾಪಾರ, ವ್ಯವಹಾರಕ್ಕೆ ಧರ್ಮವಿಲ್ಲ, ವ್ಯಾಪಾರವೇ ಒಂದು ಧರ್ಮವಾಗಿದೆ ಎಂದು ಹೇಳಿದರು.

ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಆಶ್ಕೋ ಗ್ರೂಪ್ ಆಫ್ ಕಂಪನೀಸ್ ಝಾಂಬಿಯಾ ಇದರ ಸಿಇಒ ಡಾ. ಅಶ್ರಫ್ ಕಮ್ಮಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಆರ್ಯಾಪು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಎಚ್. ಮುಹಮ್ಮದ್ ಅಲಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೇಮ್ಸ್ ಮಾಡ್ತಾ, ಪೆಟ್ರೋಲಿಯಂ ವರ್ತಕರ ಸಂಘದ ದ.ಕ ಜಿಲ್ಲಾಧ್ಯಕ್ಷ ವಾಮನ್ ಪೈ, ಮೇನಾಲ ಮಧುರ ಇಂಟರ್ ನ್ಯಾಶನಲ್ ಸ್ಕೂಲ್‍ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಕಿರಣ್ ಎಂಟರ್‍ಪ್ರೈಸಸ್‍ನ ಕೇಶವ ನಾಯಕ್ ಎಂ, ನ್ಯಾಯವಾದಿ ಸಾಹಿರಾ ಝುಬೇರ್, ಕೂರ್ನಡ್ಕ ಮಸೀದಿಯ ಮುದರ್ರಿಸ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಖತೀಬ್ ಉನೈಸ್ ಫೈಝಿ ವಳವೂರು, ಮಧುರಾ ಗ್ರೂಪ್‍ನ ಸ್ಥಾಪಕ ಡಿ.ಎ ಖಾದರ್ ಹಾಜಿ ಮಧುರಾ ಮತ್ತಿತರ ನೂರಾರು ಮಂದಿ ಆಗಮಿಸಿ ಶುಭ ಹಾರೈಸಿದರು.

ಯುನೈಟೆಡ್ ಹೋಂ ಡೆಕೋರ್‍ನ ಆಡಳಿತ ಪಾಲುದಾರರಾದ ಹನೀಫ್ ಮಧುರಾ, ಅಹ್ಮದ್ ಕಬೀರ್, ಅಹ್ಮದ್ ಶೆಹಿಯಾ ಹಾಗೂ ಅಬ್ದುಲ್ ಹಕೀಂ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರಶೀದ್ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಅತ್ಯಾಧುನಿಕ ಶೈಲಿಯ ಶೋರೂಂ

ಯುನೈಟೆಡ್ ಹೋಂ ಡೆಕೋರ್ ಶೋರೂಂನ ಆಡಳಿತ ಪಾಲುದಾರರಾದ ಹನೀಫ್ ಮಧುರಾ, ಅಹ್ಮದ್ ಕಬೀರ್, ಅಹ್ಮದ್ ಶೆಹಿಯಾ ಹಾಗೂ ಅಬ್ದುಲ್ ಹಕೀಂ ಅವರ ಪಾಲುದಾರಿಕೆಯಲ್ಲಿ ಪ್ರಾರಂಭಿಸಲ್ಪಟ್ಟಿದ್ದು, ಮಳಿಗೆಯಲ್ಲಿ ಸೋಫಾ, ಕಪಾಟು, ಡೈನಿಂಗ್ ಟೇಬಲ್, ಟೀ ಟೇಬಲ್, ಬೆಡ್ ರೂಂ ಇಂಟೀರಿಯರ್, ವಾಲ್ ಪೇಪರ್, ಕಿಚನ್ ಇಂಟಿರಿಯರ್, ವಾಲ್ ಕ್ಲಾಡಿಂಗ್, ಕರ್ಟೆನ್ಸ್ ಹಾಗೂ ಇನ್ನಿತರ ಆಧುನಿಕ ಶೈಲಿಯ ಗೃಹೋಪ ಯೋಗಿ ಪೀಠೋಪಕರಣಗಳು ಹಾಗೂ ಇನ್ನಿತರ ನಾನಾ ತರದ ಆಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News