ಅ.19 : ಉಜಿರೆ ಎಸ್‍ಡಿಎಂ ಐಟಿ ಕಾಲೇಜಿನಲ್ಲಿ ಕ್ಲೀನ್ ಇಂಡಿಯಾ ಹಾಕಥಾನ್

Update: 2019-10-18 17:13 GMT

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಗಳೂರಿನ ಡಿಲೈತ್ ಸಹಭಾಗಿತ್ವದೊಂದಿಗೆ ಮಂಗಳೂರು ವಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ  ಅ.19 ಕ್ಲೀನ್ ಇಂಡಿಯಾ ಹ್ಯಾಕಥಾನ್  ಅಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ.ಅಶೋಕ್ ಕುಮಾರ್ ತಿಳಿಸಿದರು.

ಅವರು ಬೆಳ್ತಂಗಡಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಕುರಿತು ವಿವರಿಸಿದರು. ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯುವ ಸಮುದಾಯದಲ್ಲಿ ಜಾಗೃತಿಯ ಜತೆಗೆ ಸಂಶೋಧನಾತ್ಮಕವಾಗಿ  ಚಿಂತನೆ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯುವ ಸಂಶೋಧಕರಿಗೆ ಪ್ರಯೋಜನಕಾರಿಯಾಗಿದೆ. ಪ್ರಸ್ತುತ ಸಮಸ್ಯೆಯಾದ ತ್ಯಾಜ್ಯ ವಿಭಜನೆ ಎಂಬ  ವಿಷಯದ ಕುರಿತಾಗಿ ಕ್ಲೀನ್ ಇಂಡಿಯಾ ಹಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅ.19ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆಯ ವರೆಗೆ ನಿರಂತವಾಗಿ ಈ ಸ್ಪರ್ಧೆ ನಡೆಯಲಿದೆ ಎಂದರು.

ಜಿಲ್ಲೆಯ 20 ಇಂಜಿನಿಯರಿಂಗ್ ಕಾಲೇಜಿನಿಂದ ಸ್ಪರ್ಧೆಗೆ ಪ್ರಾಥಮಿಕವಾಗಿ ನೊಂದಾಯಿಸಿದ 68 ತಂಡಗಳಲ್ಲಿ 25 ತಂಡಗಳು ಫೈನಲ್ ಹಂತಕ್ಕೆ ಆಯ್ಕೆ ಆಗಿರುತ್ತದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಅಲೋಚನಾ ಲಹರಿ ಮತ್ತು ತಾಂತ್ರಿಕ ಜ್ಞಾನದ ಮೂಲಕ ತ್ಯಾಜ್ಯ ನಿವಾರಣಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಇದರಿಂದಾಗಿ ಸ್ಮಾರ್ಟ್ ಮನೆ ಮತ್ತು ಸ್ಮಾರ್ಟ್ ನಗರದ ಪರಿಕಲ್ಪನೆ ದೊರಕಿಸುವುದು. ವಿದ್ಯಾರ್ಥಿಗಳಲ್ಲಿ ಆವಿಷ್ಕಾರಕ್ಕೆ ಉತ್ತೇಜನ ನೀಡುವ ಮೂಲಕ ಅವರಲ್ಲಿಯೂ ಸಂಶೋಧನಾತ್ಮಕ ಚಿಂತನೆಗಳು ಬೆಳೆಯಲಿ ಎಂಬುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಆಗಿರುತ್ತದೆ. ವಿಜೇತ ತಂಡಕ್ಕೆ ರೂ 25,000 ಬಹುಮಾನ ಘೋಷಣೆಯಾಗಿದ್ದು, ಅನಂತರ ಮೂಲ ಮಾದರಿ ತಯಾರಿಗೆ ರೂ. 50,000 ಡಿಲೈತ್ ಕಂಪನಿಯು ಪ್ರಾಯೋಜಕತ್ವ ವಹಿಸಲಿದೆ ಎಂದರು.

ಅ.19ರಂದು ಬೆಳಗ್ಗೆ 9 ಗಂಟೆಗೆ ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬೆಂಗಳೂರಿನ ಸಿ-ಸ್ಕ್ವಾರ್ ಇನ್ಫೋ ಸೋಲ್ಯೂಶನ್‍ನ ಪ್ರಾಡೆಕ್ಟ್ ಹೆಡ್ ಸಂತೋಷ್ ಭೂಷಣ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಪ್ರೊ.ರಾಮಕೃಷ್ಣ ಹೆಗ್ಡೆ, ಕಾಲೇಜಿನ ಪ್ರಾಧ್ಯಾಪಕ ಡಾ.ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News