ಮೂಡುಬಿದಿರೆ ಅತ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್ ಶಾಲೆಗಳಿಗೆ ಸಮಗ್ರ ಪ್ರಶಸ್ತಿ

Update: 2019-10-18 17:17 GMT

ಮೂಡುಬಿದಿರೆ :  ಇಲ್ಲಿನ ಸ್ವರಾಜ್ಯ ಮೈದಾನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಎರಡು ದಿನಗಳ ಕಾಲ ನಡೆದ ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅತ್ಲೆಟಿಕ್ಸ್ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿರುವ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ  ಮತ್ತು 42 ಅಂಕಗಳನ್ನು ಗಳಿಸಿರುವ ಆಳ್ವಾಸ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು ಒಟ್ಟು  9 ನೂತನ ಕೂಟ ದಾಖಲೆಗಳಾಗಿವೆ.

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಆಂಗ್ಲಮಾಧ್ಯಮ ಶಾಲೆ ,ಪುತ್ತಿಗೆ  (32ಅಂಕ), 14 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ (61 ಅಂಕ), ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ (29 ಅಂಕ), 17 ವರ್ಷದೊಳಗಿನ ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ (98 ಅಂಕ)ಹಾಗೂ ಬಾಲಕಿಯರಲ್ಲಿ ಆಳ್ವಾಸ್ ಆಂಗ್ಲಮಾಧ್ಯಮ ಶಾಲೆ (15 ಅಂಕ) ತಂಡ ಪ್ರಶಸ್ತಿ ಗಳಿಸಿವೆ.

ವೈಯಕ್ತಿಕ ಕ್ರೀಡಾಗ್ರಣಿ ಪ್ರಶಸ್ತಿ :  ಆಳ್ವಾಸ್ ಪಾಲಿಗೆ 

 ಎಲ್ಲ ವೈಯಕ್ತಿಕ ಕ್ರೀಡಾಗ್ರಣಿ ಪ್ರಶಸ್ತಿಗಳು ಆಳ್ವಾಸ್ ಪಾಲಾಗಿವೆ. ಪ್ರಾ. ಶಾಲಾ ಬಾಲಕರ ವಿಭಾಗದಲ್ಲಿ ಆಳ್ವಾಸ್  ಕ.ಮಾ.ಶಾಲೆಯ ಶಿವಾನಂದ ಪೂಜಾರಿ (10), ಬಾಲಕಿಯರಲ್ಲಿ  ಆಳ್ವಾಸ್  ಆ. ಮಾ. ಶಾಲೆಯ ಗೌತಮಿ ಹಾಗೂ ಅದೇ ಶಾಲೆಯ ಹರ್ಷಿತಾ ಆರ್. (ಇಬ್ಬರೂ 13 ಅಂಕ) ವೈಯಕ್ತಿಕ ಕ್ರೀಡಾಗ್ರಣಿ ಪ್ರಶಸ್ತಿ ಗಳಿಸಿದರು.

14 ವರ್ಷದ ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಆಳ್ವಾಸ್ ಕ.ಮಾ. ಶಾಲೆಯ ಸಂಜು, ಸುಜಲ್, ಮಂಜುನಾಥ, ಸೌರಭ್ (ಇಬ್ಬರೂ 10 ಅಂಕ),  ಬಾಲಕಿಯರಲ್ಲಿ ಆಳ್ವಾಸ್ ಆ. ಮಾ. ಶಾಲೆಯ ಕೀರ್ತನಾ ಮತ್ತು  ಪೂರ್ವಿ ಸತ್ಯಪ್ಪ (ಇಬ್ಬರೂ  10 ಅಂಕ), 17 ವರ್ಷದ ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಆಳ್ವಾಸ್ ಕ.ಮಾ. ಶಾಲೆಯ ಕಿರಣ (15), ಬಾಲಕಿಯರಲ್ಲಿ ಆಳ್ವಾಸ್ ಆ.ಮಾ.ಶಾಲೆಯ ಬಿ.ಎಂ. ಹರ್ಷಿತಾ ಮತ್ತು ಪ್ರಣಮ್ಯ (ಇಬ್ಬರೂ 15 ಅಂಕ) ವೈಯಕ್ತಿಕ ಕ್ರೀಡಾಗ್ರಣಿ ಪ್ರಶಸ್ತಿ ಎತ್ತಿಕೊಂಡು ಆಳ್ವಾಸ್ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News