ಉಪ್ಪಿನಂಗಡಿ: ಅ.20ರಂದು ಉಚಿತ ವೈದ್ಯಕೀಯ ತಪಾಸಣೆ

Update: 2019-10-18 17:19 GMT

ಉಪ್ಪಿನಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಪುತ್ತೂರು ಶಾಖೆ ಮತ್ತು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇವರ ಜಂಟಿ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಉಚಿತ ದಂತ ಚಿಕಿತ್ಸಾ, ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣಾ ಕಾರ್ಯಕ್ರಮ ಅ.20ರಂದು ಪುತ್ತೂರು ಬಪ್ಪಳಿಗೆಯ ಆಶ್ಮಿ ಕಂಫರ್ಟ್‍ನಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 9ರಿಂದ 12:30ರವರೆಗೆ ಶಿಬಿರ ನಡೆಯಲಿದ್ದು, ಈ ಶಿಬಿರದಲ್ಲಿ ಚರ್ಮ, ಎಲುಬು, ಕಣ್ಣು, ಕಿವಿ, ಮೂಗು, ಗಂಟಲು, ಮಕ್ಕಳ ಚಿಕಿತ್ಸೆ, ಮಧುಮೇಹ ತಪಾಸಣೆ, ಹಲ್ಲುಗಳ ತಪಾಸಣೆ, ಶುಚೀಕರಣ, ಹಲ್ಲುಗಳ ತುಂಬಿಸುವಿಕೆ, ಹಲ್ಲುಗಳನ್ನು ಕೀಳಿಸುವುದು, ಉಚಿತ ಸೀಳುತುಟಿ ತಪಾಸಣೆ ಮತ್ತು ಚಿಕಿತ್ಸೆ ಮೊದಲಾದ ಸೇವೆಗಳು ದೊರೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News