ವಿಜ್ಞಾನ ವಸ್ತು ಪ್ರದರ್ಶನ: ಇಂದ್ರಪ್ರಸ್ಥದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

Update: 2019-10-18 17:26 GMT

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ 2019-20 ನೇ ಸಾಲಿನ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಯು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.

ಇಂದ್ರಪ್ರಸ್ಥ ವಿದ್ಯಾಲಯದ 9 ನೇ ತರಗತಿಯ ವಿದ್ಯಾರ್ಥಿಗಳಾದ ರಿತ್ವಿಕ್ ಪೈ ಮತ್ತು ಸಮರ್ಥ್ ಜಿ.ಕೆ. ಯವರು ಪ್ರದರ್ಶಿಸಿದ "ಹೈಡ್ರೋಫಿಲಿಕ್ ಮ್ಯಾಟರ್ಸ್ ಬೈ ಬಯೋಪೋಲಿಮರ್ ಪೆಕ್ಟಿನ್ ಫ್ರಂ ಸಿಟ್ರೆಸ್ ಮ್ಯಾಕ್ಸಿಮಾ" ವಿಜ್ಞಾನ ಮಾದರಿ ಹಾಗೂ 8ನೇ ತರಗತಿಯ ಮಹತಿ ರಾಣಿ ಪಿ.ಎಸ್. ರವರ "ರಿಸೈಕಲ್ ಪೇಪರ್ ವಿತ್ ಪ್ಲಾಂಟ್ ಲಿವ್ಸ್ ಫಾರ್ ಮಲ್ಟಿಪಲ್ ಆಪ್ಲಿಕೇಶನ್ಸ್" ಹಾಗೂ 8ನೇ ತರಗತಿಯ ಆಶಿಶ್ ಎ.ಸ್ ನ "ಹರ್ಬಲ್ ಡಿಶ್ ವಾಶರ್ ಫ್ರಂ ಪ್ಯಾಡಿಹಸ್ಕ್ ಆಂಡ್ ಸೋಪ್ ಬೆರ್ರಿ" ವಿಜ್ಞಾನ ಮಾದರಿಗಳು ದ್ವಿತೀಯ ಬಹುಮಾನವನ್ನು ಪಡೆದು, ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News