ಚೀನಾದ ಜಿಡಿಪಿ 6 ಶೇಕಡಕ್ಕೆ ಇಳಿಕೆ

Update: 2019-10-18 17:46 GMT

ಬೀಜಿಂಗ್, ಅ. 18: ಚೀನಾದ ಆರ್ಥಿಕತೆ ಮೂರನೇ ತ್ರೈಮಾಸಿಕದಲ್ಲಿ ಸುಮಾರು ಮೂರು ದಶಕಗಳ ಅವಧಿಯಲ್ಲೇ ಅತ್ಯಂತ ನಿಧಾನವಾಗಿ ಬೆಳೆದಿದೆ. ಅಮೆರಿಕದೊಂದಿಗೆ ಸುದೀರ್ಘ ಸಮಯದಿಂದ ನಡೆಯುತ್ತಿರುವ ವ್ಯಾಪಾರ ಸಮರ ಹಾಗೂ ಕ್ಷೀಣಿಸುತ್ತಿರುವ ದೇಶಿ ಬೇಡಿಕೆಯು ಆರ್ಥಿಕತೆಯ ಮೇಲೆ ಪರಿಣಾಮ ಬೀರಿವೆ ಎನ್ನುವುದನ್ನು ಅಂಕಿಅಂಶಗಳು ಶುಕ್ರವಾರ ತೋರಿಸಿವೆ.

ಚೀನಾದ ಒಟ್ಟು ದೇಶಿ ಉತ್ಪನ್ನವು ಎರಡನೇ ತ್ರೈಮಾಸಿಕದಲ್ಲಿದ್ದ 6.2 ಶೇಕಡದಿಂದ ಜುಲೈ-ಸೆಪ್ಟಂಬರ್ ಅವಧಿಯಲ್ಲಿ 6 ಶೇಕಡಕ್ಕೆ ಕುಸಿದಿದೆ ಎಂದು ಚೀನಾದ ನ್ಯಾಶನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ತಿಳಿಸಿದೆ.

 ಇದು 1992ರ ಬಳಿಕ ಅತಿ ಕಳಪೆ ತ್ರೈಮಾಸಿಕ ಬೆಳವಣಿಗೆಯಾಗಿದೆ. ಆದರೆ, ಇದು ಸರಕಾರದ ಗುರಿ ವ್ಯಾಪ್ತಿಯಾದ 6.0-6.5 ಶೇಕಡದಲ್ಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News