ಮಲೆನಾಡು ಗಲ್ಫ್ ಅಸೋಸಿಯೇಶನ್ ಅಧ್ಯಕ್ಷರಾಗಿ ಮುಸ್ತಾಕ್ ಗಬ್ಬಲ್ ಆಯ್ಕೆ

Update: 2019-10-18 18:29 GMT

ಜಿದ್ದಾ, ಅ.18: ಮಲೆನಾಡು ಗಲ್ಫ್ ಅಸೋಸಿಯೇಶನ್ (ಎಂ.ಜಿ.ಏ) ಇದರ ವಾರ್ಷಿಕ ಮಹಾಸಭೆ ಶುಕ್ರವಾರ ಜಿದ್ದಾದ ಶರಫಿಯಾದ ಸ್ನ್ಯಾಕ್ ರೆಸ್ಟೋರಂಟ್ ನ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಶೀರ್ ಬಾಳುಪೇಟೆ, ಎಮ್.ಜಿ.ಎ. ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು.

ಕೇಂದ್ರ ಸಮಿತಿ ಯಿಂದ ಬಶೀರ್ ಬಾಳುಪೇಟೆ, ಶರೀಫ್ ಪುಂಜಾಲಕಟ್ಟೆ, ಅಶ್ರಫ್ ಉಪ್ಪಳ್ಳಿ, ಹನೀಫ್ ಬಿಳಗುಳ, ಸಿರಾಜ್ ಚಕ್ಕಮಕ್ಕಿ, 
ಆಗಮಿಸಿದ್ದರು.

ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಮುಸ್ತಾಕ್ ಗಬ್ಗಲ್ ರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಅಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಹೈದ್ರೋಸ್ ಮೂಡಿಗೆರೆ, ಉಪಾಧ್ಯಕ್ಷರಾಗಿ ಜಲಾಲ್ ಬೇಗ್ ಸಕಲೇಶಪುರ ಮತ್ತು ಸಿದ್ದೀಕ್ ಬಾಳೆಹೊನ್ನೂರು, ಕಾರ್ಯದರ್ಶಿಗಳಾಗಿ ಇಕ್ಬಾಲ್ ಗಬ್ಗಲ್, ಸಹ ಕಾರ್ಯದರ್ಶಿಯಾಗಿ ಜಾಕಿರ್ ಸಕಲೇಶಪುರ, ಮೀಡಿಯಾ ಕಮ್ಯುನಿಕೇಶನ್ ಉಸ್ತುವಾರಿಯಾಗಿ ಹಾರಿಸ್ ಬಿಳಗುಳ, ಕೋಶಾಧಿಕಾರಿಯಾಗಿ ಮುಸ್ತಾಕ್ ಬಿಳಗುಳ ಆಯ್ಕೆಯಾದರು.

ಸಮಿತಿ ಸದಸ್ಯರಾಗಿ ರಿಯಾಝ್ ಗಬ್ಗಲ್, ರಫೀಕ್ ಮದೀನ, ಹನೀಫ್ ಮದೀನ, ಹಾರುನ್ ಅಲ್ ಕುರುಮ, ರಿಯಾಝ್ ಅಲ್ ಕುರುಮ, ಸಿರಾಜ್ ಯಾಂಬು, ಹೈದರ್ ಯಂಬು, ಹಾರಿಸ್ ಉಪ್ಪಳ್ಳಿ, ನೂರ್ ತೀರ್ಥಹಳ್ಳಿ, ನಾಸಿರ್ ಶೇಕ್ ಸಾಗರ, ಇಸ್ಮಾಯಿಲ್ ಹಾನಬಳ್, ಶಫೀಕ್ ಸಾಗರ, ಸಯ್ಯದ್ ನಾಸಿರ್ ಹಾಸನ, ಖಾದರ್ ಆಲ್ದೂರು, ರಿಯಾಝ್ ತಾಯಿಫ್, ಮಹಬೂಬ್ ಆಲಿ ಶಿವಮೊಗ್ಗ ರನ್ನು ಆಯ್ಕೆ ಮಾಡಲಾಯಿತು.

ಸಿದ್ದೀಕ್ ಬಾಳೆಹೊನ್ನೂರು ಕಾರ್ಯಕ್ರಮ  ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News