ಕದ್ರಿ ಗೋಪಲನಾಥ್‌ಗೆ ವಿವಿಧ ಸಂಘ ಸಂಸ್ಥೆಗಳಿಂದ ಶ್ರದ್ಧಾಂಜಲಿ

Update: 2019-10-19 14:58 GMT

ಮಂಗಳೂರು, ಅ.19: ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ,ಮಂಗಳೂರು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ, ಮಲ್ಲಿಕಾ ಕಲಾವೃಂದ , ಕದ್ರಿ ಕ್ರಿಕೆಟರ್ಸ್‌ ಕ್ಲಬ್, ಕದ್ರಿ ್ರೆಂಡ್ಸ್, ಕದಿರೆ ಕಲಾವಿದರು,ರೋಟರಿ ಕ್ಲಬ್ ಸೌತ್, ರೋಟರಿ ಕ್ಲಬ್ ಸಹಿತ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಸ್ಯಾಕ್ಸೋೋನ್ ವಾದಕ ಕದ್ರಿ ಗೋಪಾಲನಥ್‌ಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಕದ್ರಿ ಪಾರ್ಕ್ ಬಳಿ ಇರುವ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಶುಕ್ರವಾರ ಜರುಗಿತು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕದ್ರಿ ಗೋಪಾಲನಾಥ್ ಸುಮಾರು 400ಕ್ಕೂ ಮಿಕ್ಕಿ ಕಲಾವಿದರನ್ನು ಸೇರಿಸಿಕೊಂಡು ಕಚೇರಿ ನಡೆಸಿ ಸೈನಿಕರಿಗೆ ನೆರವಾಗಿದ್ದರು. ಸಮಾಜಮುಖಿ ಕೆಲಸಗಳನ್ನು ಮಾಡಿ ಸ್ಯಾಕ್ಸೋಪೋನ್ ಮೂಲಕ ಕೋಟ್ಯಂತರ ಜನರ ಹದಯವನ್ನು ಗೆದ್ದು ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. ಇದೀಗ ಅವರನ್ನು ಕಳೆದುಕೊಂಡು ದುಃಖ ನಮ್ಮೆಲ್ಲರಲ್ಲಿದೆ. ಮುಂದಿನ ಪೀಳಿಗೆ ಅವರ ಸೇವೆಯನ್ನು ಶಾಶ್ವತವಾಗಿ ನೆನಪಿಡುವಂತಾಗಲು ನಗರದ ಪ್ರಮುಖ ರಸ್ತೆಯೊಂದಕ್ಕೆ ಹೆಸರಿಡಲು ಶಿಾರಸು ಮಾಡಲಾಗುವುದು ಎಂದರು.

ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಉಪಾಧ್ಯಕ್ಷ ಡಾ.ಪಿ.ಕೇಶವನಾಥ್ ಮಾತನಾಡಿ ಕದ್ರಿ ಗೋಪಾಲನಾಥ ಸಮುದಾಯದ ಹಿರಿಯ ವ್ಯಕ್ತಿಯ ಸಾಧನೆ ಬಣ್ಣಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈಶ್ವರ ಗುರೂಜಿ ಶಂಕರಪುರ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕೋಶಾಧಿಕಾರಿ ಎಚ್.ಕೆ.ಪುರುಷೋತ್ತಮ್, ಕಸಾಪ ದ.ಕ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಶೋಕ್ ಡಿಕೆ.,ತಾರಾನಾಥ್ ಶೆಟ್ಟಿ ಬೋಳಾರ, ಸತೀಶ್ ಬೋಳಾರ,ಅಶೋಕ್, ಕದ್ರಿ ಕ್ರಿಕೆಟರ್ಸ್‌ ಕ್ಲಬ್ ಅಧ್ಯಕ್ಷ ಧನ್‌ರಾಜ್, ದಿನೇಶ್ ದೇವಾಡಿಗ, ಕದಿರೆಯ ಕಲಾವಿದರ ಸಂಘದ ಗೋಕುಲ್ ಕದ್ರಿ, ಕಿಶೋರ್ ಡಿ ಶೆಟ್ಟಿ, ತುಳು ಕಲಾವಿದರ ತಂತ್ರಜ್ಞರ ಒಕ್ಕೂಟದ ಮೋಹನ್ ಕೊಪ್ಪಳ ಕದ್ರಿ,ಗೋಕುಲ್‌ದಾಸ್ ಶೆಟ್ಟಿ, ಸತೀಶ್ ಬೋಳಾರ,ಪ್ರಕಾಶ್ ಶೆಟ್ಟಿ,ಕೆ.ಎಸ್.ದೇವಾಡಿಗ, ಮೋಹನ್‌ದಾಸ್ ಶೆಟ್ಟಿ, ಗೋಪಾಲನಾಥ್ ಸಹೋದರ ಗುರುಪ್ರಸಾದ್, ಪುತ್ರ ಕದ್ರಿ ಮಣಿಕಾಂತ್,ಪದ್ಮನಾಭ್, ರಾಮಚಂದ್ರ ಮಾಸ್ಟರ್, ಅಮಿತಾ ಸಂಜೀವ್, ಅಂಬಿಕ ಮೋಹನ್, ಕೆ.ಸುರೇಶ್ ಜೋಗಿ, ಎಂ.ಸುರೇಶ್ ಜೋಗಿ, ಸುನೀಲ್ ಪಾಲ್ದಡಿ, ವಿನಯಾನಂದ ಕಾನಡ್ಕ, ಜೋಗಿ ಮಹಿಳಾ ಘಟಕ, ಯುವಘಟಕ ಮತ್ತಿತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News