ಅಣೆಕಟ್ಟು ಕುಸಿದು 13 ಚಿನ್ನದ ಗಣಿ ಕಾರ್ಮಿಕರು ಮೃತ್ಯು

Update: 2019-10-19 15:51 GMT

ಮಾಸ್ಕೋ, ಅ. 19: ರಶ್ಯದ ಸೈಬೀರಿಯ ವಲಯದ ಕ್ರಸ್ನೊಯರ್ಸ್‌ಕ್ ನಗರದಲ್ಲಿರುವ ಚಿನ್ನದ ಗಣಿಯೊಂದರ ಪಕ್ಕದಲ್ಲಿರುವ ಅಣೆಕಟ್ಟು ಕುಸಿದು ಶನಿವಾರ ಮುಂಜಾನೆ 13 ಮಂದಿ ಮೃತಪಟ್ಟಿದ್ದಾರೆ ಎಂದು ರಶ್ಯದ ತುರ್ತು ನಿರ್ವಹಣೆಗಳ ಸಚಿವಾಲಯ ತಿಳಿಸಿದೆ.

‘‘ಈಗಿನ ಮಟ್ಟಿಗೆ, 13 ಮಂದಿ ಮೃತಪಟ್ಟಿರುವ ಮಾಹಿತಿಯಿದೆ’’ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಹದಿನಾಲ್ಕು ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅದು ಹೇಳಿದೆ.

ಸೈಬಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ಕುಸಿದು ಪ್ರವಾಹದ ನೀರು ಕಾರ್ಮಿಕರು ವಾಸಿಸುತ್ತಿದ್ದ ಹಲವು ಕೋಣೆಗಳಿಗೆ ನುಗ್ಗಿದಾಗ ಅವರು ಮುಳುಗಿ ಮೃತಪಟ್ಟಿದ್ದಾರೆ.

10ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಕ್ರಸ್ನೊಯರ್ಸ್‌ಕ್ ನಗರದ ದಕ್ಷಿಣದಲ್ಲಿರುವ ತಾತ್ಕಾಲಿಕ ವಸತಿಗಳಲ್ಲಿ ಸುಮಾರು 80 ಮಂದಿ ವಾಸಿಸುತ್ತಿದ್ದರು ಎಂದು ಪ್ರಾದೇಶಿಕ ಗವರ್ನರ್ ಅಲೆಕ್ಸಾಂಡರ್ ಉಸ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News