ಕಲಾವಿದ ಶಂಕರ್ ಹುಬ್ಬಳ್ಳಿಯ ಕಲಾಪ್ರದರ್ಶನ ಉದ್ಘಾಟನೆ

Update: 2019-10-19 16:08 GMT

ಉಡುಪಿ, ಅ.19: ಉಡುಪಿ ಆರ್ಟಿಸ್ಟ್ ಫೋರಂ ವತಿಯಿಂದ ಉಡುಪಿಯ ದೃಷ್ಟಿ ಆರ್ಟ್ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಹುಬ್ಬಳ್ಳಿಯ ಕಲಾವಿದ ಕೆ.ವಿ.ಶಂಕರ್ ಅವರ ಚಿತ್ರಕಲಾ ಪ್ರದರ್ಶನವನ್ನು ಉಡುಪಿ ಜಿಲ್ಲಾಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಎಸ್ಪಿ, ಚಿತ್ರ ಕಲೆಯಿಂದ ಮನಸ್ಸಿನ ಒತ್ತಡ ನಿವಾರಣೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಕಲಾ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ದಂತ ವೈದ್ಯ ಡಾ.ವಿಜಯೇಂದ್ರ ವಸಂತ್, ಬ್ರಹ್ಮಾವರ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ಪ್ರಕಾಶಚಂದ್ರ ಶೆಟ್ಟಿ, ಆರ್ಟಿಸ್ಟ್ ಫೋರಂ ಉಪಾಧ್ಯಕ್ಷ ಪುರುಷೋತ್ತಮ್ ಅಡ್ವೆ, ಕಲಾವಿದ ಕೆ.ವಿ.ಶಂಕರ್ ಉಪಸ್ಥಿತರಿದ್ದರು. ಆರ್ಟಿಸ್ಟ್ ಫೋರಂ ಅಧ್ಯಕ್ಷ ರಮೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಕು ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.

ಅ.21ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಈ ಪ್ರದರ್ಶನ ನಡೆಯಲಿದ್ದು, ಇಲ್ಲಿರುವ ಸುಮಾರು 50 ಕಲಾಕೃತಿಗಳಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನ ಕುರಿತು ಬೆಳಕು ಚೆಲ್ಲಲಾಗಿದೆ. ಜಲವರ್ಣ, ಅಕ್ರಲಿಕ್ ಮಾಧ್ಯಮದ ಈ ಕಲಾಕೃತಿಗಳಲ್ಲಿ ಡೊಳ್ಳು ಕುಣಿತ, ದುರ್ಗಮುರ್ಗಿ ಯರು, ಮೊಹರಂನ ಹುಲಿ, ಗೋರಪ್ಪರು, ಜೊೀಗವ್ವ ಅದ್ಭುತವಾಗ ಮೂಡಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News