ಉಚ್ಚಿಲ ಹೆದ್ದಾರಿಯಲ್ಲಿ ಪರದೆ ಅಳವಡಿಸಲು ಸ್ಥಳೀಯರಿಂದ ವಿರೋಧ

Update: 2019-10-19 16:36 GMT

ಪಡುಬಿದ್ರಿ: ಉಚ್ಚಿಲ ಪ್ರದೇಶದ ಹೆದ್ದಾರಿ ಡಿವೈಡರ್ ಮಧ್ಯದಲ್ಲಿ ಹಸಿರು ಬಣ್ಣದ ಪರದೆ ಅಳವಡಿಸುವುದಕ್ಕೆ ಸ್ಥಳೀಯರು ಹಾಗೂ ಬಡಾಗ್ರಾಮ ಪಂಚಾಯ್ತಿ ವಿರೋಧ ವ್ಯಕ್ತಪಡಿಸಿದ ಘಟನೆ ಉಚ್ಚಿಲದಲ್ಲಿ ಶನಿವಾರ ನಡೆದಿದೆ. 

ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪೇಟೆಯಲ್ಲಿ ರಸ್ತೆ ದಾಟುವುದರಿಂದ ಅಪಘತ ವಲಯವಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು  ಮಹಾಲಿಂಗೇಶ್ವರ ದೇವಸ್ಥಾನದ ಎದುರು, ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆಯ ಎದುರು, ಬುದಿಯಾ ಪೆಟ್ರೋಲ್ ಪಂಪ್ ಎದುರು ಹಾಗೂ ಕಲ್ಯಾಣಿ ಬಾರ್ ಎದುರು ಅಪಘಾತ ವಲಯ ಪ್ರದೇಶ ಎಂದು ಗುರುತಿಸಿತ್ತು. ಈ ಪ್ರದೇಶದಲ್ಲಿ ಪರದೆ ಅಳವಡಿಸಲು ನವಯುಗ ಕಂಪೆನಿಗೆ ಸೂಚಿಸಲಾಗಿತ್ತು. ಪೊಲೀಸರು ಸೂಚಿಸಿದ ಸ್ಥಳಗಳಲ್ಲಿ ಪರದೆ  ಅಳವಡಿಸುವುದನ್ನು  ಸ್ಥಳೀಯರು ಹಾಗೂ ಗ್ರಾಮ ಪಂಚಾಯತಿಯ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸರ್ವೀಸ್ ರಸ್ತೆಯನ್ನು ನಿರ್ಮಿಸದೆ ಏಕಾಏಕಿ ಅಪಘತ ವಲಯ ಎಂದು ಗುರುತಿಸಿ ಪರದೆ ಅಳವಡಿಸುವುದರಿಂದ ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಇದಕ್ಕೆ ಸರ್ವೀಸ್ ರಸ್ತೆ, ಅಂಡರ್ ಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ಸ್ಥಳಕ್ಕೆ ಆಗಮಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ಪ್ರಯತ್ನಿಸಿದದರು. ಅದರೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತ ಪಡಿಸಿದ ಬಳಿಕ ನವಯುಗ ಕಂಪೆನಿಯ ಸಿಬ್ಬಂದಿ ಅಲವಡಿಸಿದ ಪರದೆಯನ್ನು ಕಿತ್ತು ಹಾಕಿದರು.

ಇದೇ ವೇಳೆ ರಿಕ್ಷಾ ಚಾಲಕರು ಹೆದ್ದಾರಿಯಲ್ಲಿ ದಾರಿ ದೀಪವೂ ಇಲ್ಲ ಸರ್ವೀಸ್ ರಸ್ತೆಯನ್ನು ನಿರ್ಮಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಹಾಗೂ ನವಯುಗ ಕಂಪೆನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News