ಮಂಗಳೂರು: ಅ.21 ರಿಂದ ಎ.ಜೆ. ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ, ಮಾಹಿತಿ ಶಿಬಿರ

Update: 2019-10-19 17:10 GMT

ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅ. 21 ರಿಂದ 30ರವರೆಗೆ ಸ್ತನ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಸ್ತನ ಕ್ಯಾನ್ಸರ್ ತಪಾಸಣೆ ಎಂದರೇನು ?

ಕ್ಯಾನ್ಸರ್ ತಪಾಸಣೆ ಕೆಲವು ಸರಳ ಪರೀಕ್ಷೆಗಳನ್ನು ಒಳಗೊಂಡಿದೆ. ಸಾಮಾನ್ಯ ಕ್ಯಾನ್ಸರ್ ಗಳನ್ನು ಅದು ಇಡೀ ದೇಹಕ್ಕೆ ಹರಡುವ ಮೊದಲೇ ಈ ಪರೀಕ್ಷೆ ಮತ್ತು ಪ್ರಕ್ರಿಯೆಗಳ ಮೂಲಕ ಪತ್ತೆ ಹಚ್ಚಿ ಗುಣಪಡಿಸುವುದಾಗಿದೆ.  ಇವುಗಳು ನೋವು ರಹಿತ ಮತ್ತು ಸಂಪೂರ್ಣವಾಗಿ ಯಾವುದೇ ಅಡ್ಡ ಪರಿಣಾಮವನ್ನು ಒಳಗೊಂಡಿರುವುದಿಲ್ಲ. ರಕ್ತ ಪರೀಕ್ಷೆಯಾಗಲೀ, ಮೂತ್ರ ಪರೀಕ್ಷೆಯಾಗಲೀ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದಿಲ್ಲ. ಪ್ರಯೋಗಾಲಯಗಳಲ್ಲಿ ತಪಾಸಣೆಯನ್ನು ನಡೆಸಲಾಗದು. ಇದನ್ನು ವೈದ್ಯರೇ ನಿಮಗೆ ಅಪಾಯ ಪತ್ತೆ ಹಚ್ಚುವಿಕೆಗೆಂದು ನಿಗದಿ ಪಡಿಸಿದ ಪರೀಕ್ಷೆಗಳ ಆಧಾರದ ಮೇಲೆ ಕ್ಯಾನ್ಸರ್ ಸಾಧ್ಯತೆಯನ್ನು ಪತ್ತೆ ಹಚ್ಚುತ್ತಾರೆ.

ಶಿಬಿರದ ಪ್ರಯೋಜನಗಳು :-

ತಜ್ಞ ವೈದ್ಯರಿಂದ ಸ್ತನ ಹಾಗೂ ಗರ್ಭಕೊಶದ ಕ್ಯಾನ್ಸರ್ ಬಗ್ಗೆ ಮಾಹಿತಿ ಸಂವಹನ, ಮಹಿಳೆಯರಿಗಾಗಿ ಪ್ರತ್ಯೇಕ ಸ್ವಪರಿಶೀಲನಾ ಕೊಠಡಿ ಸೌಲಭ್ಯ, ನೋಂದಾವಣೆ ಹಾಗೂ ವೈದ್ಯರೊಂದಿಗಿನ ಫ್ರಥಮ ಸಂದರ್ಶನ ಉಚಿತ, ಪ್ಯಾಪ್ ಸ್ಮಿಯರ್ ತಪಾಸಣೆ ಉಚಿತ, ಮ್ಯಾಮೋಗ್ರಾಮ್, ಮ್ಯಾಮೋಗ್ರಫೀ ಸ್ಕ್ಯಾನಿಂಗ್ ಉಚಿತ, ಮಹಿಳೆಯರ ಕ್ಯಾನ್ಸರ್ ತಪಾಸಣೆ ಪ್ಯಾಕೇಜ್ ಮೇಲೆ 50% ರಿಯಾಯಿತಿ ನೀಡಲಾಗುವುದು. ಹೋರ ರೋಗಿ ತಪಾಸಣೆಗಳಿಗೆ 25% ರಿಯಾಯಿತಿ ನೀಡಲಾಗುವುದು. ಒಳರೋಗಿಯಾಗಿ ದಾಖಾಲಾದಲ್ಲಿ ಬಿಲ್ಲಿನ ಒಟ್ಟು ಮೋತ್ತದಲ್ಲಿ 10% ರಿಯಾಯಿತಿ ನೀಡಲಾಗುವುದು. ರೇಡಿಯೇಶನ್ ಚಿಕಿತ್ಸೆಯನ್ನು 15% ರಿಯಾಯಿತಿ ದರದಲ್ಲಿ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ದೂ.ಸಂ. 0824 6613635/3644ಗೆ ಕರೆ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News