ಬಿಎಸ್‌ಎಫ್ ಯೋಧನ ಹತ್ಯೆಗೆ ತಪ್ಪು ತಿಳಿವಳಿಕೆ ಕಾರಣ: ಬಾಂಗ್ಲಾದೇಶದ ಗೃಹ ಸಚಿವ

Update: 2019-10-19 18:20 GMT

 ಕೋಲ್ಕತ್ತಾ, ಅ. 19: ಬಿಎಸ್‌ಎಫ್ ಯೋಧ ವಿಜಯ್ ಭಾನ್ ಸಿಂಗ್ ಹತ್ಯೆಗೆ ಉಭಯ ದೇಶಗಳ ಪಡೆಗಳ ನಡುವಿನ ತಪ್ಪು ತಿಳಿವಳಿಕೆ ಕಾರಣ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಪರಿಸ್ಥಿತಿ ಶಾಂತಗೊಳಿಸಲು ಅಮಿತ್ ಶಾ ಅವರೊಂದಿಗೆ ತಾನು ಮಾತುಕತೆ ನಡೆಸಲಿದ್ದೇನೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸದುಝ್ಝಮಾನ್ ಖಾನ್ ಶನಿವಾರ ಹೇಳಿದ್ದಾರೆ.

ಬಾಂಗ್ಲಾದೇಶಿ ಬಾರ್ಡರ್ ಗಾರ್ಡ್ (ಬಿಬಿಸಿ) ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧನನ್ನು ಹತ್ಯೆಗೈದಿರುವ ಘಟನೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿ ಶಾಂತವಾಗಿಸಲು ಅಗತ್ಯವಿದ್ದರೆ, ಭಾರತದ ಸೋದ್ಯೋಗಿ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

 ಬಾಂಗ್ಲಾದೇಶದ ಜಲಭಾಗಕ್ಕೆ ಕಾನೂನು ಬಾಹಿರವಾಗಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಗುರುವಾರ ಬಂಧಿಸಲಾಗಿರುವ ಭಾರತೀಯ ಮೀನುಗಾರರನ್ನು ನಿಯಮಗಳಿಗೆ ಅನುಸಾರವಾಗಿ ಬಿಡುಗಡೆ ಮಾಡಲಾಗುವುದು ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News