ಬಾಲಿವುಡ್ ನಟರೊಂದಿಗೆ ಪ್ರಧಾನಿ ಸಂವಾದ

Update: 2019-10-19 18:22 GMT

ಹೊಸದಿಲ್ಲಿ, ಅ. 19: ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಶಾರುಕ್ ಖಾನ್ ಹಾಗೂ ಅಮೀರ್ ಖಾನ್ ಸಹಿತ ಬಾಲಿವುಡ್‌ನ ನಟರು ಹಾಗೂ ನಿರ್ಮಾಪಕರು ಪ್ರಧಾನಿ ಮೋದಿ ಅವರನ್ನು ಅವರ ಇಲ್ಲಿನ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಈ ಸಂದರ್ಭ ಅವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಚಲನಚಿತ್ರ ಹಾಗೂ ದೂರದರ್ಶನ ಜಗತ್ತಿನ ಹಲವರು ಮಹಾತ್ಮಾ ಗಾಂಧಿ ಅವರ ಚಿಂತನೆಗಳನ್ನು ಜನಪ್ರಿಯಗೊಳಿಸಲು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

  ಕಾರ್ಯಕ್ರಮದಲ್ಲಿ ಅಮೀರ್ ಖಾನ್, ಶಾರುಕ್ ಖಾನ್, ರಾಜ್‌ಕುಮಾರ್ ಹಿರಾನಿ, ಕಂಗಣಾ ರಾಣಾವತ್, ಆನಂದ್ ಎಲ್. ರಾಯ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸೋನಂ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್, ತಾರಕ್ ಮೆಹ್ತಾ ಗ್ರೂಪ್, ಇಟಿವಿ ಗುಂಪಿನ ಸದಸ್ಯರ ಸಹಿತ ಭಾರತೀಯ ಚಿತ್ರ ಹಾಗೂ ಮನೋರಂಜನೆ ಉದ್ಯಮದ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News