×
Ad

ಕರ್ವಾಲೊ ಡಂಪಿಂಗ್ ಯಾರ್ಡ್‌ಗೆ ಶಾಸಕ ರಘುಪತಿ ಭಟ್ ಭೇಟಿ

Update: 2019-10-21 18:53 IST

ಉಡುಪಿ, ಅ.21: ಉಡುಪಿ ಶಾಸಕ ಕೆ.ರಘುಪತಿ ಭಟ್ ಅಲೆವೂರಿನ ಕರ್ವಾಲೊನಲ್ಲಿರುವ ಉಡುಪಿ ನಗರಸಭೆಯ ಡಂಪಿಂಗ್ಯಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಡಂಪಿಂಗ್ ಯಾರ್ಡ್‌ನಲ್ಲಿ ಈಗಿರುವ ಸಮಸ್ಯೆಗಳು, ಅವುಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಕುರಿತು ಉಡುಪಿ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಿವಿಧ ಮಾಹಿತಿಗಳನ್ನು ಪಡೆದರು.

ಶಾಸಕರ ಜೊತೆಗೆ ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ನಗರಸಭೆ ಇಂಜಿನಿಯರ್ ಗಣೇಶ್, ಪರಿಸರ ಅಧಿಕಾರಿಗಳು, ಇನ್ನಿತರ ಸಂಬಂದಪಟ್ಟ ನಗರಸಭೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು ಮಾಜಿ ಉಡುಪಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News