ಸುಜೀರ್: ನೇತ್ರಾವತಿ ನದಿಯಲ್ಲಿ ಮರಳು ತೆಗೆಯಲು ತೆರಳಿದ್ದ ಕಾರ್ಮಿಕ ನಾಪತ್ತೆ

Update: 2019-10-21 14:46 GMT
ಸಾಂದರ್ಭಿಕ ಚಿತ್ರ

ಬಂಟ್ವಾಳ,ಅ. 21: ಫರಂಗಿಪೇಟೆ ಸಮೀಪದ ಪುದು ಗ್ರಾಮದ ಸುಜೀರ್ ನೇತ್ರಾವತಿ ನದಿತಟದಲ್ಲಿ ನಾಡದೋಣಿಯ ಮೂಲಕ ಮರಳು ತೆಗೆಯುವಾಗ ಕಾರ್ಮಿಕನೋರ್ವ ನಾಪತ್ತೆಯಾಗಿರುವ ಬಗ್ಗೆ ಸೋಮವಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉತ್ತರ ಪ್ರದೇಶದ ಬಾಯಾತ್‍ಪುರ ಬಾಜ್ಡಿಪುರ್ ನಿವಾಸಿ ಕಮಲೇಶ್ ಕುಮಾರ್ (38) ನೇತ್ರಾವತಿ ನದಿಯಲ್ಲಿ ನಾಪತ್ತೆಯಾದ ಕಾರ್ಮಿಕ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ 6.30ರ ಸುಮಾರಿಗೆ ಪುದು ಗ್ರಾಮದ ಸುಜೀರ್ ಬಳಿಯ ನೇತ್ರಾವತಿ ನದಿಯಲ್ಲಿ ಮಾರಿಪಳ್ಳ ವ್ಯಕ್ತಿಯೊಬ್ಬರಿಗೆ ಸೇರಿದ ನಾಡದೋಣಿಯ ಮೂಲಕ 8 ಮಂದಿ ಮರಳು ತೆಗೆಯಲು ತೆರಳಿದ್ದೆವು. ನಾಡದೋಣಿ ಮೂಲಕ ನದಿಯಲ್ಲಿ ಮರಳು ತೆಗೆಯುತ್ತಿದ್ದ ವೇಳೆ ಕಾರ್ಮಿಕ ಕಮಲೇಶ್ ಎಂಬವರು ದೋಣಿಯಿಂದ ಆಕಸಿಕವಾಗಿ ಬಿದ್ದಿದ್ದು, ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಇನ್ನೋರ್ವ ಕಾರ್ಮಿಕ ಗುಡ್ಡು ಪ್ರಸಾದ್ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ತನಿಖೆ ಮುಂದುವರಿಸಿದ್ದಾರೆ. ಇಲ್ಲಿನ ಸುಜೀರ್ ಹೊಳೆಯ ತಟದಲ್ಲಿ ಕಳೆದ ಒಂದು ತಿಂಗಳ ಹಿಂದೆ ಉತ್ತರ ಪ್ರದೇಶ 9 ಮಂದಿ ತಂಡ ಟೆಂಟ್ ಮೂಲಕ ವಾಸವಾಗಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News