ಆರೋಗ್ಯಯುಕ್ತ ಬದುಕಿಗೆ ಅಯೋಡಿನ್ ಅಗತ್ಯ: ಶೀಲಾ ಕೆ. ಶೆಟ್ಟಿ

Update: 2019-10-21 14:51 GMT

ಉಡುಪಿ, ಅ.21: ಮಕ್ಕಳಲ್ಲಿ ನಿಯಮಿತವಾದ ಅಯೋಡಿನ್‌ಯುಕ್ತ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯಯುತ ಬದುಕಿಗೆ ಅಯೋಡಿನ್ ಅತೀ ಅಗತ್ಯ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.

ಸೋಮವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಮಿಡ್‌ಟೌನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಹನುಮಂತ ನಗರದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ವಿಶ್ವ ಅಯೋಡಿನ್ ದಿನಾಚರಣೆಯನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ದಿಮಾಂದ್ಯತೆ ಹಾಗೂ ಗರ್ಭಿಣಿ ಸ್ತ್ರೀಯರಲ್ಲಿ ಗರ್ಭಪಾತದಂತಹ ಸಮಸ್ಯೆಗಳುಉಂಟಾಗಬಹುದು. ಅಯೋಡಿನ್ ಕೊರತೆಯಿಂದ ಗಳಗಂಡ ರೋಗ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ದಿನನಿತ್ಯದ ಆಹಾರ ಪದ್ದತಿಯಲ್ಲಿ ಹಿತಮಿತವಾಗಿ ಅಯೋಡಿನ್ ಬಳಸುವ ಬಗ್ಗೆ ಶಾಲಾ ಮಕ್ಕಳು ತಿಳಿದುಕೊಂಡು ತಮ್ಮ ಮನೆಯವರಿಗೂ ಈ ಬಗ್ಗೆ ಮಾಹಿತಿ ನೀಡಬೇಕು ಎಂದವರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಓ ಓ.ಆರ್ ಪ್ರಕಾಶ್ ಮಾತನಾಡಿ, ತಿನ್ನುವ ಆಹಾರದಲ್ಲಿ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಇರಬೇಕು. ಆಹಾರ ತಿನ್ನುವ ಪ್ರಮಾಣಕ್ಕಿಂತ ನಾವು ಯಾವ ಆಹಾರವನ್ನು ತಿನ್ನುತ್ತೇವೆ ಎನ್ನುವುದು ಮುಖ್ಯ.ಅಯೋಡಿನ್ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದು ಓದಿನಲ್ಲಿ ಹಿಂದುಳಿಯುವ ಸಂಭವವಿರುತ್ತದೆ ಎಂದವರು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ, ದಿನನಿತ್ಯದ ಆಹಾರದಲ್ಲಿ ಕನಿಷ್ಠ 150 ಮೈಕ್ರೋಗ್ರಾಂನಷ್ಟು ಅಯೋಡಿನ್ ಇರಲೇಬೇಕು. ನಮ್ಮ ದೇಹದಲ್ಲಿ ಅಯೋಡಿನ್ ಉತ್ಪತ್ತಿ ಆಗುವುದಿಲ್ಲವಾದ್ದರಿಂದ ಆಹಾರದ ಮೂಲಕ ಸೇವಿಸಬೇಕು. ಸಮುದ್ರ ಉತ್ಪನ್ನಗಳಲ್ಲಿ ಅಯೋಡಿನ್ ಅಂಶ ಸುಲಭವಾಗಿ ಲ್ಯವಾಗುವುದರಿಂದ ಈ ಆಹಾರವನ್ನು ಹೇರಳವಾಗಿ ಬಳಸಬೇಕು. ಮತ್ತು ಆಹಾರದಲ್ಲಿ ಉಪ್ಪನ್ನು ಬಳಸುವಾಗ ಕಡ್ಡಾಯವಾಗಿ ಅಯೋಡಿನ್‌ಯುಕ್ತ ಉಪ್ಪನ್ನೇ ಬಳಸುವಂತೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಯೋಡಿನ್ ಮಾಹಿತಿ ಕುರಿತ ಕರಪತ್ರ ಬಿಡುಗಡೆ ಮಾಡಲಾಯಿತು ಹಾಗೂ ವಿಶ್ವ ಅಯೋಡಿನ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಹನುಮಂತ ನಗರ ಸರಕಾರಿ ಪ್ರೌಢಶಾಲೆಯ ಪ್ರಾಂಶುಪಾಲೆ ನುಶ್ರತ್ ಜಹಾನ್ ಅಕ್ಬರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ರೋಟರಿ ಮಿಡ್‌ಟೌನ್ ಅಧ್ಯಕ್ಷ ಸಂದೇಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಆರೋಗ್ಯ ಮೇಲ್ವಿಚಾರಕ ಆನಂದ ಗೌಡ ಸ್ವಾಗತಿಸಿ, ವಿಜಯ ಬಾಯಿ ಕಾರ್ಯಕ್ರಮ ನಿರೂಪಿಸಿದರು. ನಿತ್ಯಾನಂದ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News