ಬೈಂದೂರು: ಮನೆ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಆಗ್ರಹ

Update: 2019-10-21 16:15 GMT

ಬೈಂದೂರು, ಅ.21: 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 15 ಲಕ್ಷ ಕುಟುಂಬಗಳಿಗೆ ಸ್ವಂತ ಮನೆಗಳಿಲ್ಲ. ವಾಸ್ತವದಲ್ಲಿ ವಸತಿ ರಹಿತರ ಸಂಖ್ಯೆ ಇದಕ್ಕೂ ದೊಡ್ಡದಿದೆ. ಇವರೆಲ್ಲರಿಗೂ ನಿವೇಶನಗಳನ್ನು ಒದಗಿಸಿ ಮನೆಗಳನ್ನು ನಿರ್ಮಿಸಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಕುಂದಾಪುರ ತಾಲೂಕು ಕಾರ್ಯದರ್ಶಿ ನಾಗರತ್ನ ನಾಡ ಹೇಳಿದ್ದಾರೆ.

ಬೈಂದೂರು ಸಿಐಟಿಯು ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ಯಡ್ತರೆ ಗ್ರಾಪಂ ವ್ಯಾಪ್ತಿಯ ಮನೆ, ನಿವೇಶನ ರಹಿತ ಅರ್ಜಿದಾರರ ಸಮಾ ವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ, ಮನೆ, ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಕೈಗೆ ಸಿಗುವ ವರೆಗೆ ಸರಕಾರದ ವಿರುದ್ಧ ನಡೆಸುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡ್ತರೆ ಗ್ರಾಮದ ನಿವೇಶನ ರಹಿತರ ಹೋರಾಟ ಸಮಿತಿಗೆ ಅಬ್ಬಕ್ಕ ಕತ್ಲೆಕಾನ್ ಹಿತ್ತಲು, ಜ್ಯೋತಿ ಶಿವರಾಜ್, ಶ್ಯಾಮಲ ಹೆಗ್ಡೇರ ಮನೆ, ಅಲ್ಫೊನ್ಸ್ ರಬೇರೊ, ನಾಗರತ್ನ ಕುದ್ರಿಸಾಲ್, ಕಲ್ಪನಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News